# ಕಡಬ : ಕೊಯಿಲದಲ್ಲಿ ನದಿಗೆ ಸ್ನಾನಕ್ಕಿಳಿದು ಕಣ್ಮರೆಯಾದ ವ್ಯಕ್ತಿಯ ಮೃತದೇಹ ಪತ್ತೆ

- Link: https://hosakannada.com/news/kadaba-koila-news/
- Published: 2021-09-23T15:49:00+00:00
- Author: Praveen Chennavara

ಕಡಬ : ಮಂಗಳವಾರ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ತೆರಳಿ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಗುರುವಾರ
ಪತ್ತೆಯಾಗಿದೆ.ಈ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದಲ್ಲಿ ನಡೆದಿದೆ.

Sponsored

ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ ಚಂದಪ್ಪ ಗೌಡ(67ವ.) ನಾಪತ್ತೆಯಾದವರು. ಇವರು ಸೆ. 21ರಂದು ಮಧ್ಯಾಹ್ನ
12.30ಕ್ಕೆ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ಹೇಳಿ ಹೋದವರು ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ
ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು.

Advertisement

Advertisement

ಜತೆಗಿದ್ದ ವ್ಯಕ್ತಿ ನೀಡಿದ ಮಾಹಿತಿಯಂತೆ ಚಂದಪ್ಪ ಗೌಡರ ಪತ್ತೆಗಾಗಿ ಅಗ್ನಿಶಾಮಕ ದಳ ಹಾಗೂ ಮುಳುಗುತಜ್ಞರು
ನೀರಿನಲ್ಲಿ ಬುಧವಾರ ಸಂಜೆಯವರೆಗೂ ಹುಡುಕಾಡಿದರೂ ಯಾವುದೇ ಸುಳಿವು ಪತ್ತೆಯಾಗಲಿಲ್ಲ.ಕತ್ತಲಾದ ಹಿನ್ನೆಲೆಯಲ್ಲಿ
ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಗುರುವಾರ ಇವರ ಮೃತದೇಹ ಪತ್ತೆಯಾಗಿದೆ.

Advertisement
