# BHEL ಸೂಪರ್ವೈಸರ್  ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ನವೆಂಬರ್ 25 ಕಡೆಯ ದಿನ! ಇಂದೇ ಅರ್ಜಿ ಸಲ್ಲಿಸಿ!!

- Link: https://hosakannada.com/news/job-news-bhel-supervisor-trainee-recruitment-2023-latest-updates/
- Published: 2023-11-14T15:18:30+00:00
- Author: ಹೊಸಕನ್ನಡ ನ್ಯೂಸ್

BHEL Recruitment 2023: ಭಾರತ್ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್‌ (BHEL) ನಲ್ಲಿ ಖಾಲಿ ಮೆಕ್ಯಾನಿಕಲ್/
ಸಿವಿಲ್ / ಹೆಚ್‌ಆರ್‌ ವಿಭಾಗದ ಸೂಪರ್‌ವೈಸರ್‌ ಹುದ್ದೆಗಳನ್ನು ತರಬೇತಿದಾರರಾಗಿ ನೇಮಕ ಮಾಡಿಕೊಳ್ಳಲು
ಅರ್ಜಿ ಆಹ್ವಾನ ಮಾಡಲಾಗಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

Sponsored

**ನೇಮಕಾತಿ ಪ್ರಾಧಿಕಾರ :** ಭಾರತ್ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್‌
 **ಹುದ್ದೆಗಳ ಹೆಸರು : **
ಸೂಪರ್‌ವೈಸರ್ ಟ್ರೈನಿ **ಹುದ್ದೆಗಳ ಸಂಖ್ಯೆ :** 75

Advertisement

Advertisement

ಸೂಪರ್‌ವೈಸರ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು 25-10-2023 ಆರಂಭಿಕ ದಿನವಾಗಿದ್ದು, 25-11-
2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
 ಭಾರತ್ ಹೆವಿ ಇಲೆಕ್ಟ್ರಿಕಲ್ಸ್‌ ಲಿಮಿಟೆಡ್ನ ಅಧಿಕೃತ
ವೆಬ್‌ಸೈಟ್‌ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. [https://bhel.com/](https://bhel.com/)**
BHEL Recruitment 2023 Notification**

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
 # ಬಿಹೆಚ್‌ಇಎಲ್‌ ಕರಿಯರ್ ವೆಬ್‌ಪೇಜ್‌ಗೆ ಭೇಟಿ ನೀಡಿ. #ಓಪನ್
ಆದ ಪೇಜ್‌ನಲ್ಲಿ ‘Apply Online >> Candidate Login’ ಎಂಬಲ್ಲಿ ಕ್ಲಿಕ್ ಮಾಡಿಕೊಳ್ಳಿ. # ಹೆಸರು,
ಮೊಬೈಲ್ ನಂಬರ್, ಇ-ಮೇಲ್‌ ವಿಳಾಸ ನೀಡಿ ರಿಜಿಸ್ಟ್ರೇಷನ್‌ ಪಡೆದು ಮತ್ತೆ ಲಾಗಿನ್‌ ಆಗುವ ಮೂಲಕ ವಿದ್ಯಾರ್ಹತೆ,
ಕೇಳಲಾದ ಇತರೆ ಮಾಹಿತಿ ನೀಡಿ ಅರ್ಜಿ ಸಲ್ಲಿಸಬಹುದು.

**ಅರ್ಹತಾ ಮಾನದಂಡಗಳು:**
 * ವಿದ್ಯಾರ್ಹತೆ ಗಮನಿಸಿದರೆ, ಈ ಹುದ್ದೆಗಳಿಗೆ ಅನುಗುಣವಾಗಿ ಮೆಕ್ಯಾನಿಕಲ್
ಇಂಜಿನಿಯರಿಂಗ್ / ಸಿವಿಲ್ ಇಂಜಿನಿಯರಿಂಗ್ / ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿ ಪಡೆದವರು
ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. * ಕನಿಷ್ಠ ಶೇಕಡ.65 ಅಂಕಗಳೊಂದಿಗೆ ಉತ್ತೀರ್ಣ ರಾಗಿರಬೇಕು.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. * ಈ ಹುದ್ದೆಗೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯೋಮಿತಿ 27 ವರ್ಷ ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ
ನಿಯಮಗಳು ಅನ್ವಯವಾಗುತ್ತವೆ.

**ಅರ್ಜಿ ಶುಲ್ಕ :**
 ಸಾಮಾನ್ಯ / ಆರ್ಥಿಕವಾಗಿ ಹಿಂದುಳಿದ / ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:
ರೂ.795 ಆಗಿದ್ದು,ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:
ರೂ.295 ಆಗಿರಲಿದೆ. ಅರ್ಜಿ ಶುಲ್ಕವನ್ನು ಇಂಟರ್‌ನೆಟ್‌ ಬ್ಯಾಂಕಿಂಗ್, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌
ಕಾರ್ಡ್‌ ಮೂಲಕ ಪಾವತಿ ಮಾಡಬಹುದು.

Advertisement
