# Jio: ‘ಜಿಯೋ’ ಬಳಕೆದಾರರ ಸಂಖ್ಯೆ ರಿವಿಲ್ ಮಾಡಿದ ರಿಲಯನ್ಸ್ – ಇತರ ಟೆಲಿಕಾಂ ಗಳಿಗೆ ಎಷ್ಟಿದ್ದಾರೆ ಬಳಕೆದಾರರು?

- Link: https://hosakannada.com/news/jio-reliance-reveals-the-number-of-jio-users/
- Published: 2025-09-04T09:46:01+00:00
- Author: ಹೊಸಕನ್ನಡ ನ್ಯೂಸ್

Jio: ಹುಟ್ಟಿಕೊಂಡ ಕೆಲವೇ ಸಮಯಗಳಲ್ಲಿ ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ಪಸರಿಸಿದ ಜಿಯೋ ಸಂಸ್ಥೆ
ಇದೀಗ ತನ್ನ ಒಟ್ಟು ಗ್ರಾಹಕರ ಸಂಖ್ಯೆಯನ್ನು ರಿವಿಲ್ ಮಾಡಿದೆ. ಹಾಗಿದ್ರೆ ಜಿಯೋ ಜೊತೆಗೆ ಏರ್‌ಟೆಲ್,
ಬಿಎಸ್‌ಎನ್‌ಎಲ್ ಸೇರಿದಂತೆ ಟೆಲಿಕಾಂ ಕಂಪನಿಗಳ ಗ್ರಾಹಕರು ಎಷ್ಟಿದ್ದಾರೆ ಗೊತ್ತಾ?

Sponsored

ಭಾರತದಲ್ಲಿ ಏರ್ಟೆಲ್ 33.65% (39.1 ಕೋಟಿ ಬಳಕೆದಾರರು) ಹೊಂದಿದ್ದರೆ, ವೊಡಾಫೋನ್ ಐಡಿಯಾ 17.52%(
20.38 ಕೋಟಿ ಬಳಕೆದಾರರು) ಹೊಂದಿದೆ. ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಒಟ್ಟಾಗಿ 7.79% ಪಾಲನ್ನು
ಹೊಂದಿವೆ. ಈ ಮೂಲಕ ಜಿಯೋ ಮೊದಲ ಸ್ಥಾನದಲ್ಲಿದ್ದರೆ ಉಳಿದ ಟೆಲಿಕಾಂ ನೆಟ್‌ವರ್ಕ್ ನಂತರದ ಸ್ಥಾನದಲ್ಲಿದೆ.

Advertisement

Advertisement

ಅಂದಹಾಗೆ ರಾಷ್ಟ್ರೀಯವಾಗಿ, ಜಿಯೋ ಜುಲೈ ತಿಂಗಳಲ್ಲಿ ಒಟ್ಟು 4.82 ಲಕ್ಷ ಚಂದಾದಾರರನ್ನು ಸೇರಿಸಿಕೊಂಡಿದೆ.
ಒಟ್ಟು ಬಳಕೆದಾರರ ಸಂಖ್ಯೆಯನ್ನು 47.75 ಕೋಟಿಗೆ ಹೆಚ್ಚಿಸಿಕೊಂಡಿದೆ ಮತ್ತು 41.04% ಮಾರುಕಟ್ಟೆ ಪಾಲನ್ನು
ಹೊಂದಿರುವ ಮೊಬೈಲ್ ವಿಭಾಗದಲ್ಲಿ ಮುಂಚೂಣಿಯಲ್ಲಿದೆ.

ರಾಷ್ಟ್ರೀಯ ಮಟ್ಟದಲ್ಲಿ, ಜಿಯೋ 64,45,929 ಲಕ್ಷಕ್ಕೂ ಹೆಚ್ಚು ಚಂದಾದಾರರೊಂದಿಗೆ 76% ಪಾಲನ್ನು ಹೊಂದಿದ್ದು,
ಎಫ್‌ಡಬ್ಲ್ಯೂಎ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. ಇನ್ನು ರಾಜ್ಯದಲ್ಲಿ ಸಕ್ರಿಯ 
ಜಿಯೋ ಏರ್‌ಫೈಬರ್ ಬಳಕೆದಾರರ ಸಂಖ್ಯೆ ಜುಲೈನಲ್ಲಿ 3,51,817 ಕ್ಕೆ ಏರಿದೆ. ಇದು 2025 ರ ಜೂನ್‌ನಲ್ಲಿ
3,39,981 ರಷ್ಟಿತ್ತು.

Advertisement
