# ಜೆಇಇ ಮುಖ್ಯ ಪರೀಕ್ಷೆಯ ಸೆಷನ್​ 1 ರ ಫಲಿತಾಂಶ ಪ್ರಕಟ

- Link: https://hosakannada.com/news/jee-mains-2023-session-1-exam-results-declared/
- Published: 2023-02-07T16:45:33+00:00
- Author: Praveen Chennavara

ಬೆಂಗಳೂರು : ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹತೆ ಒದಗಿಸುವ ಜೆಇಇ ಮುಖ್ಯ ಪರೀಕ್ಷೆಯ
ಸೆಷನ್​ 1 ರ ಫಲಿತಾಂಶ ಪ್ರಕಟಿಸಲಾಗಿದೆ.

Sponsored

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ಜೆಇಇ ಮುಖ್ಯ ಪರೀಕ್ಷೆಯು ಜನವರಿ 24ರಿಂದ ಫೆಬ್ರವರಿ 1ರವರೆಗೆ
ನಡೆದಿತ್ತು.
ಅಭ್ಯರ್ಥಿಗಳು ಫಲಿತಾಂಶವನ್ನು ವೀಕ್ಷಿಸಲು jeemain.nta.nic.in ಅಥವಾ ntaresults.
nic.in. ವೆಬ್​ಸೈಟ್​ಗೆ ಭೇಟಿ ನೀಡಬಹುದು.

Advertisement

Advertisement

ಎನ್​ಐಟಿ, ಐಐಐಟಿ ಮತ್ತು ಇತರೆ ಸೆಂಟ್ರಲಿ ಫಂಡೆಡ್​ ಟೆಕ್ನಿಕಲ್​ ಇನ್ಸುಟಿಟ್ಯೂಶನ್​ (ಸಿಎಫ್​ಟಿಐ)
ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಅಡಿಗಳಲ್ಲಿ ಬರುವ ಇಂಜಿನಿಯರಿಂಗ್​
ಪದವಿಗಳಿಗೆ ಈ ಜೆಇಇ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಸೆಷನ್​2 ನ ದಾಖಲಾತಿ ಫೆಬ್ರವರಿ 7ರಿಂದ ಆರಂಭವಾಗಲಿದೆ.ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ ಟಾಪ್​
ಬಂದ 2.5 ಲಕ್ಷ ಅಭ್ಯರ್ಥಿಗಳು ಅಡ್ವಾನ್ಸ್​ ಪರೀಕ್ಷೆ ಎದುರಿಸಲು ಅರ್ಹರಾಗುತ್ತಾರೆ.

ಸೆಷನ್​ 1ರ ಬಳಿಕ ಮುಂದಿನ ಹಂತದ ಪರೀಕ್ಷೆ ನಡೆಯಲಿದ್ದು, ಅದರಲ್ಲೂ ಆಯ್ಕೆಯಾದ ಅಭ್ಯರ್ಥಿಗಳು ಅಂತಿಮವಾಗಿ
ತಮ್ಮ ತಾಂತ್ರಿಕ ಶಿಕ್ಷಣ ಪ್ರಾರಂಭ ಮಾಡಬಹುದಾಗಿದೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ ಎರಡು ಪೇಪರ್‌ಗಳು
ಇರುತ್ತವೆ. ಪೇಪರ್ 1 ಪರೀಕ್ಷೆಯನ್ನು ಎನ್​ಐಟಿ, ಐಐಐಟಿ ಮತ್ತು ಸಿಎಫ್​ಟಿಐ ಹಾಗೂ ರಾಜ್ಯ ಸರ್ಕಾರಿ
ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಬಿಇ, ಬಿಟೆಕ್‌ ಕೋರ್ಸ್‌ಗೆ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

Advertisement
