# Mangaluru: ರೈಲ್ವೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಜನಿವಾರ, ಮಂಗಳಸೂತ್ರ ನಿಷಿದ್ಧ!

- Link: https://hosakannada.com/news/janiwara-mangalsutra-prohibited-for-candidates-appearing-for-railway-exams/
- Published: 2025-04-28T08:41:17+00:00
- Author: ಹೊಸಕನ್ನಡ ನ್ಯೂಸ್

Mangaluru: ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷೆ 29 ರಂದು ನಡೆಯಲಿದೆ. ನರ್ಸಿಂಗ್‌ ಸೂಪರಿಂಟೆಂಡೆಂಟ್‌
ಪರೀಕ್ಷೆ ಹಮ್ಮಿಕೊಳ್ಳಲಾಗಿದ್ದು, ಅಭ್ಯರ್ಥಿಗಳಿಗೆ ಹಾಲ್‌ಟಿಕೆಟ್‌ ನೀಡಲಾಗಿದೆ. ಇದರಲ್ಲಿ ಮಂಗಳಸೂತ್ರ
ಮತ್ತು ಧಾರ್ಮಿಕ ಸಂಕೇತಗಳನ್ನೆಲ್ಲ ತೆಗೆದಿರಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

Sponsored

ರೈಲ್ವೆ ನೇಮಕಾತಿ ಮಂಡಳಿಯ ಈ ಕ್ರಮಕ್ಕೆ ಜಿಲ್ಲೆಯ ಹಿಂದೂ ಪರ ಸಂಘಟನೆಗಳ ಮುಖಂಡರು ತೀವ್ರ ಆಕ್ಷೇಪ 
ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಮಣೇಲ್‌ ಬೆಸೆಂಟ್‌ ವಿದ್ಯಾ ಕೇಂದ್ರದಲ್ಲಿ ಈ ಪರೀಕ್ಷೆ ನಡೆಯಲಿದೆ.
ಈ ಪರೀಕ್ಷೆಗೆ ನೀಡಲಾದ ಹಾಲ್‌ಟಿಕೆಟ್‌ನಲ್ಲಿ ಮಂಗಳಸೂತ್ರ ತೆಗೆದಿರಿಸುಂತೆ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

Advertisement

Advertisement

ಜನಿವಾರ ಮತ್ತು ಮಂಗಳಸೂತ್ರ ಹಿಂದೂಗಳ ಧಾರ್ಮಿಕ ಸಂಪ್ರದಾಯ. ಇದನ್ನು ತೆಗೆದು ಪರೀಕ್ಷೆ ಬರೆಯುವಂತೆ
ಉಲ್ಲೇಖ ಮಾಡಿರುವುದನ್ನು ಪ್ರವೇಶ ಪತ್ರದಲ್ಲಿ ತಿಳಿಸಲಾಗಿದೆ.

Advertisement
