# ಪಿಕಪ್‌ನಿಂದ ರಸ್ತೆಗೆ ಬಿದ್ದ ಕಬ್ಬಿಣದ ಸಲಾಕೆಗಳು

- Link: https://hosakannada.com/news/iron-rods-that-fell-onto-the-road-from-the-pickup/
- Published: 2026-10-09T11:30:50+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರಚೌಕಿಯ ಮಾಲೆಮಾರ್‌ ಕ್ರಾಸ್‌ ಬಳಿ ಗುರುವಾರ ರಾತ್ರಿ
ಪಿಕಪ್‌ ವಾಹನದಿಂದ ಕಬ್ಬಿಣದ ಸಲಾಕೆಗಳು ರಸ್ತೆಗೆ ಬಿದ್ದು, ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

Sponsored

ಕಬ್ಬಿಣದ ಸಲಾಕೆಗಳನ್ನು ತುಂಬಿಕೊಂಡು ಸಾಗುತ್ತಿದ್ದ ಪಿಕಪ್‌ ವಾಹನಕ್ಕೆ ಬೈಕ್‌ವೊಂದು ಏಕಾಏಕಿ ಅಡ್ಡ
ಬಂದ ಕಾರಣ ಚಾಲಕ ಬ್ರೇಕ್‌ ಹಾಕಿದ್ದು, ಈ ವೇಳೆ ಕಬ್ಬಿಣದ ಸಲಾಕೆಗಳು ರಸ್ತೆಗೆ ಬಿದ್ದಿದೆ. ಘಟನೆಯಿಂದ
ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

Advertisement

Advertisement

Advertisement
