# ‘ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್: ಇನ್ನು ಮುಂದೆ ಯುವಕರಿಗೆ 2.50 ಲಕ್ಷ, ಯುವತಿಗೆ 3 ಲಕ್ಷ ಪ್ರೋತ್ಸಾಹಧನ – ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ

- Link: https://hosakannada.com/news/intercaste-marriagr-and-karnataka-government/
- Published: 2022-05-23T13:04:55+00:00
- Author: Mallika

ಬೆಂಗಳೂರು: ರಾಜ್ಯ ಸರ್ಕಾರದಿಂದ ಅಂತರ್ಜಾತಿ ವಿವಾಹ ಪ್ರೋತ್ಸಾಹಿಸೋ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು
ಇಡಲಾಗಿದೆ. ಪರಿಶಿಷ್ಟ ಪಂಗಡದ( ST) ಯುವಕ ಯುವತಿಯರು ಅಂತರ್ಜಾತಿ ವಿವಾಹವಾದರೆ ಯುವಕ ಯುವತಿಯರಿಗೆ
ತಲಾ 2.50, 3 ಲಕ್ಷ ಪ್ರೋತ್ಸಾಹಧನ ನೀಡೋದಾಗಿ ಘೋಷಿಸಿದೆ.

Sponsored

> ಪರಿಶಿಷ್ಟ ಪಂಗಡದ ಯುವಕ ಯುವತಿಯರು ಅನ್ಯಜಾತಿಯ ಯುವಕ/ಯುವತಿಯನ್ನು ವಿವಾಹವಾದಲ್ಲಿ ಅಂತಹ ಪುರುಷರಿಗೆ
> ರೂ. 2.50 ಲಕ್ಷ ಮತ್ತು ಮಹಿಳೆಯರಿಗೆ ಪ್ರೋತ್ಸಾಹಧನ ರೂ.3.00 ಲಕ್ಷಗಳು.
> ಹೆಚ್ಚಿನ ಮಾಹಿತಿಗಾಗಿ
> ಸಂಪರ್ಕಿಸಿ : 080 22261789 [pic.twitter.com/85Ynvct91u](https://t.co/85Ynvct91u)
> Advertisement
> Advertisement
> — B Sriramulu (@sriramulubjp) [May 23, 2022](https://x.com/sriramulubjp/status/1528616612911546369?ref_src=twsrc%5Etfw)

ಈ ಮಾಹಿತಿಯನ್ನು ಟ್ವೀಟ್ ನಲ್ಲಿ ಹಂಚಿಕೊಂಡಿರುವಂತ ಸಚಿವ ಬಿ.ಶ್ರೀರಾಮುಲು, ಪರಿಶಿಷ್ಟ ಪಂಗಡದ ಯುವಕ
ಯುವತಿಯರು ಅನ್ಯಜಾತಿಯ ಯುವಕ/ಯುವತಿಯನ್ನು ವಿವಾಹವಾದಲ್ಲಿ ಅಂತಹ ಪುರುಷರಿಗೆ ರೂ. 2.50 ಲಕ್ಷ ಮತ್ತು
ಮಹಿಳೆಯರಿಗೆ ಪ್ರೋತ್ಸಾಹಧನ ರೂ.3.00 ಲಕ್ಷಗಳು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 080 22261789
ಎಂದು ತಿಳಿಸಿದ್ದಾರೆ.

Advertisement
