# Indian railway: ಮಕ್ಕಳನ್ನೂ ರೈಲಲ್ಲಿ ಕರೆದುಕೊಂಡು ಹೋಗ್ತೀರಾ ?! ಹಾಗಿದ್ರೆ ಬದಲಾಗಿದೆ ನೋಡಿ ಈ ಎಲ್ಲಾ ನಿಯಮಗಳು

- Link: https://hosakannada.com/news/indian-railway-rules-for-children-latest-news/
- Published: 2023-12-14T16:35:12+00:00
- Author: ಹೊಸಕನ್ನಡ ನ್ಯೂಸ್

Indian Railways : ಭಾರತದಲ್ಲಿ ಲಕ್ಷಾಂತರ ಪ್ರಯಾಣಿಕರು(Railway Passengers) ರೈಲ್ವೇ ಮೂಲಕ 
ಪ್ರಯಾಣಿಸುವುದು ಗೊತ್ತಿರುವ ವಿಚಾರವೇ! ಈಗಾಗಲೇ ಭಾರತೀಯ ರೈಲ್ವೆ( Indian Railway)ತನ್ನ ಪ್ರಯಾಣಿಕರ
ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ
ಸೌಲಭ್ಯಗಳನ್ನು ಆರಂಭಿಸಿದೆ. ಇದೀಗ, ಮಕ್ಕಳ ಟಿಕೆಟ್‌ ರಿಸರ್ವೇಶನ್ (Children’s ticket Reservation)
ಕುರಿತು ಕೂಡ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ.

Sponsored

**# 5 ವರ್ಷದೊಳಗಿನ ಮಕ್ಕಳು ಉಚಿತವಾಗಿ ಪ್ರಯಾಣ ಮಾಡಬಹುದು:**
 1 ವರ್ಷದಿಂದ 4 ವರ್ಷದೊಳಗಿನ ಮಕ್ಕಳು
ರೈಲ್ವೆಯಲ್ಲಿ ಪ್ರಯಾಣಿಸುವುದಾದರೆ ಈ ಮಕ್ಕಳಿಗೆ ಟಿಕೆಟ್ ಬುಕ್ ಮಾಡಬೇಕಾಗಿಲ್ಲ. ರೈಲಿನಲ್ಲಿ 5 ವರ್ಷದೊಳಗಿನ
ಮಕ್ಕಳು ಟಿಕೆಟ್ ಇಲ್ಲದೆ ಪ್ರಯಾಣ ಮಾಡಬಹುದು. ಆದರೆ, ಜನರ ಬೇಡಿಕೆಯ ಅನುಸಾರ, ರೈಲ್ವೆ ಆಗಸ್ಟ್ 2022
ರಲ್ಲಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಇದರ ಅನುಸಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ
ಮಕ್ಕಳು ಉಚಿತವಾಗಿ ಪ್ರಯಾಣ ಮಾಡಬಹುದು.ಆದರೆ, ಇಲ್ಲಿ ಪ್ರತ್ಯೇಕ ಸೀಟು ಸಿಗುವುದಿಲ್ಲ. ಪೋಷಕರು ತಮ್ಮ
ಮಗುವಿಗೆ ಪ್ರತ್ಯೇಕ ಆಸನವನ್ನು ಕಾಯ್ದಿರಿಸುವ ಆಯ್ಕೆಯನ್ನು ಹೊಂದಿರಲಿದ್ದು, ಇದಕ್ಕಾಗಿ ಅವರು ಸಂಪೂರ್ಣ
ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

Advertisement

Advertisement

**#12 ವರ್ಷ ವಯಸ್ಸಿನ ಮಕ್ಕಳಿಗೆ ಅನ್ವಯವಾಗುವ ನಿಯಮ:**
 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ 
ಪ್ರತ್ಯೇಕ ಸೀಟಿನ ಅಗತ್ಯವಿರದೇ ಹೋದರು ಕೂಡಾ ಆ ಮಗುವಿಗೆ ಟಿಕೆಟ್ ದರದ ಅರ್ಧದಷ್ಟು ಪಾವತಿ ಮಾಡಬೇಕಾಗುತ್ತದೆ.
ಮಗುವು ತನ್ನ ಪೋಷಕರ ಸೀಟಿನಲ್ಲಿ ಕುಳಿತು ಪ್ರಯಾಣಿಸಬಹುದು. 5 ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ
ಪ್ರತ್ಯೇಕ ಆಸನವನ್ನು ರಿಸರ್ವ್ ಮಾಡಿದ್ದಲ್ಲಿ, ಪೂರ್ಣ ಟಿಕೆಟ್ ದರವನ್ನು ವಿಧಿಸಲಾಗುತ್ತದೆ.

Advertisement
