# Belthangady: ಅತಿದೊಡ್ಡ ಹೂವಿನ ರಂಗೋಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸ್ಥಾನ!

- Link: https://hosakannada.com/news/india-book-of-record-for-largest-flower-rangoli/
- Published: 2025-04-06T14:53:44+00:00
- Author: ಕಾವ್ಯ ವಾಣಿ

Belthangady: ಬೆಳ್ತಂಗಡಿ (Belthangady) ತಾಲೂಕಿನ ಲಾಯಿಲಾ ಗ್ರಾಮದ ಎಣಿಂಜೆಯ ಬಾಲಕಿ ಶ್ರದ್ಧಾ
ಶೆಟ್ಟಿ ಹೂವಿನಿಂದ ಮಾಡಿದ ರಂಗೋಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಲಭಿಸಿದೆ.

Sponsored

![](https://hosakannada.com/wp-content/uploads/2025/04/IMG-20250406-WA0017.jpg)

Advertisement

Advertisement

ಈ ಅತಿ ದೊಡ್ಡ ರಂಗೋಲಿಯನು ಕೆಂಗುಲಾಬಿ, ಮಲ್ಲಿಗೆ, ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂ ಸೇರಿದಂತೆ
ವಿವಿಧ ಬಣ್ಣಗಳ ಹೂಗಳನ್ನು ಬಳಸಿ ರಂಗೋಲಿ ರಚಿಸಲಾಗಿತ್ತು. ಈ ರಂಗೋಲಿ 8 ಫೀಟ್ ಅಗಲದಲ್ಲಿದ್ದು ಸುಮಾರು
1 ಗಂಟೆ 40 ನಿಮಿಷದಲ್ಲಿ ರಚಿಸಲಾಗಿದೆ.

ಇಂಡಿಯಾ ಬುಕ್ ಆಫ್ ಕಾರ್ಡ್ಸ್ ನಲ್ಲಿ ಅತೀ ದೊಡ್ಡ ಹೂವಿನ ರಂಗೋಲಿ ಎಂದು ಸೇರ್ಪಡೆಯಾಗಿರುವ ವಿಚಾರ 
2025ರ ಫೆಬ್ರವರಿ 3ರಂದೇ ದೃಢಪಟ್ಟಿತ್ತು, ಆದರೆ ಸರ್ಟಿಫಿಕೇಟ್ ಅಧಿಕೃತವಾಗಿ ಎಪ್ರಿಲ್ 4 ರಂದು ಶ್ರದ್ಧಾ
ಶೆಟ್ಟಿ ಕೈ ಸೇರಿದ ಕಾರಣ ಕುಟುಂಬ ಸಂತಸ ಹಂಚಿಕೊಂಡಿದೆ.

Advertisement
