# ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮಹತ್ವದ ಸೂಚನೆ!

- Link: https://hosakannada.com/news/important-advice-for-vehicle-riders-on-the-occasion-of-mangaluru-dasara-festival/
- Published: 2026-10-20T12:20:02+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ದಸರಾ ಮೆರವಣಿಗೆ ಹಿನ್ನೆಲೆಯಲ್ಲಿ ಅ.21 ರ ಬುಧವಾರ ಸಂಜೆ 4 ರಿಂದ ಅ.22 ರ ಗುರುವಾರ ಬೆಳಗ್ಗೆ
6 ರವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಪರ್ಯಾಯ
ಮಾರ್ಗ ಬಳಸುವಂತೆ ಮಂಗಳೂರು ನಗರ ಪೊಲೀಸರು ಸೂಚನೆ ನೀಡಿದ್ದಾರೆ.

Sponsored

ಕುದ್ರೋಳಿ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ಮಣ್ಣಗುಡ್ಡೆ ಜಂಕ್ಷನ್ ನಾರಾಯಣಗುರು ವೃತ್ತ (ಲೇಡಿಹಿಲ್)
ಲಾಲ್‌ಭಾಗ್ – ಬಳ್ಳಾಲ್‌ಭಾಗ್ – ಪಿವಿಎಸ್ ಜಂಕ್ಷನ್ ನವಭಾರತ ವೃತ್ತ – ಸಿಟಿ ಸೆಂಟರ್ ಹಂಪನಕಟ್ಟೆ –
ಕೆಬಿ ಕಟ್ಟೆ – ಕಾರ್‌ಸ್ಟ್ರೀಟ್ ನ್ಯೂಚಿತ್ರಾ ಜಂಕ್ಷನ್ ಮೂಲಕ ಸಾಗಿ ಮತ್ತೆ ಕುದ್ರೋಳಿ ದೇವಸ್ಥಾನವನ್ನು
ತಲುಪಲಿದೆ.

Advertisement

Advertisement

**ವಾಹನ ಸವಾರರು ಗಮನಿಸಿ: ಪರ್ಯಾಯ ಮಾರ್ಗಗಳಿವು**

**ಕೊಟ್ಟಾರ ಚೌಕಿ ಕಡೆಯಿಂದ ನಗರಕ್ಕೆ ಬರುವವರು:** ಲೇಡಿಹಿಲ್ ಮಾರ್ಗದ ಬದಲಿಗೆ ಕುಂಟಿಕಾನ – ಕೆಪಿಟಿ–
ನಂತೂರು ಮಾರ್ಗ ಬಳಸಬೇಕು.
 **ಬಂಟ್ಸ್ ಹಾಸ್ಟೆಲ್‌ನಿಂದ ಎಂ.ಜಿ. ರಸ್ತೆಗೆ ತೆರಳುವವರು:** ಬಂಟ್ಸ್
ಹಾಸ್ಟೆಲ್ – ಭಾರತ್ ಬೀಡಿ – ಬಟ್ಟಗುಡ್ಡ – ಕೆಪಿಟಿ ಅಥವಾ ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ – ಮಲ್ಲಿಕಟ್ಟೆ
ಮಾರ್ಗ ಬಳಸಬೇಕು. **ಕೆಎಸ್‌ಆರ್‌ಟಿಸಿ ಜಂಕ್ಷನ್‌ನಿಂದ ಲಾಲ್‌ಭಾಗ್ ಕಡೆಗೆ ಹೋಗುವವರು:** ಕಾಪಿಕಾಡ್–
ಕುಂಟಿಕಾನ ಅಥವಾ ಬಿಜೈ ಬಟ್ಟಗುಡ್ಡ ಮಾರ್ಗದಲ್ಲಿ ಸಂಚರಿಸಬೇಕು. **ಕೆಎಸ್‌ಆರ್‌ಟಿಸಿ ಬಸ್‌ಗಳು:** 
ಕಾಪಿಕಾಡ್ ಕುಂಟಿಕಾನ ಅಥವಾ ಬಿಜೈ – ಬಟ್ಟಗುಡ್ಡ ಮಾರ್ಗವಾಗಿ ಸಂಚರಿಸಬೇಕು. **ಹಂಪನಕಟ್ಟೆಯಿಂದ ಪಿವಿಎಸ್
ಕಡೆಗೆ ತೆರಳುವವರು:** ಕೆಎಸ್‌ಆರ್ ರಸ್ತೆಯಿಂದ ನವಭಾರತ ವೃತ್ತದ ಮೂಲಕ ಸಾಗುವ ಬದಲಿಗೆ ಹಂಪನಕಟ್ಟೆ–
ಎಲ್‌ಎಚ್‌ಎಚ್ – ಅಂಬೇಡ್ಕ‌ರ್ ಜಂಕ್ಷನ್ ಮಾರ್ಗ ಬಳಸಬೇಕು. **ನ್ಯೂಚಿತ್ರಾ ಜಂಕ್ಷನ್‌ನಿಂದ ನವಭಾರತ
ವೃತ್ತಕ್ಕೆ ತೆರಳುವವರು:** ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸಬೇಕು. **ಲೇಡಿಹಿಲ್‌ನಿಂದ ಕುದ್ರೋಳಿ
ಕಡೆಗೆ ತೆರಳುವವರು:** ನಾರಾಯಣಗುರು ವೃತ್ತ ಮಣ್ಣಗುಡ್ಡೆ ಜಂಕ್ಷನ್ ದುರ್ಗಾಮಹಲ್ ಮಾರ್ಗದ ಬದಲಿಗೆ 
ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು.

**ದಸರಾ ವೀಕ್ಷಕರಿಗೆ ಪಾರ್ಕಿಂಗ್ ಸ್ಥಳಗಳು**
 ಮೆರವಣಿಗೆ ವೀಕ್ಷಿಸಲು ಬರುವ ಸಾರ್ವಜನಿಕರು ತಮ್ಮ 
ವಾಹನಗಳನ್ನು ಪೊಲೀಸ್‌ ಇಲಾಖೆ ನಿಗದಿಪಡಿಸಿರುವ ಸ್ಥಳಗಳಲ್ಲೇ ನಿಲುಗಡೆ ಮಾಡಬೇಕು. ಕರಾವಳಿ ಮೈದಾನ 
ಪಾರ್ಕಿಂಗ್ ಅಳಕೆ ಮಾರ್ಕೆಟ್ ಪಾರ್ಕಿಂಗ್ ಉರ್ವ ಮಾರ್ಕೆಟ್ ಮೈದಾನ ಉರ್ವ ಕೆನರಾ ಸ್ಕೂಲ್ ಪಾರ್ಕಿಂಗ್
ಕೆನರಾ ಡೊಂಗರಕೇರಿ ಸ್ಕೂಲ್ ಪಾರ್ಕಿಂಗ್. ಪೊಂಪೈ ಚರ್ಚ್ ಪಾರ್ಕಿಂಗ್ ದುರ್ಗಾಮಹಲ್ ಹೋಟೆಲ್ ಪಾರ್ಕಿಂಗ್
ಕುದ್ರೋಳಿ ನಾರಾಯಣ ಕಾಲೇಜು ಪಾರ್ಕಿಂಗ್ ಬಿಇಎಂ ಸ್ಕೂಲ್ ಪಾರ್ಕಿಂಗ್ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ,
ಕಾರ್‌ಸ್ಟ್ರೀಟ್ ಹೋಟೆಲ್ ವಿಮಲೇಶ್ ಪಾರ್ಕಿಂಗ್

**ಪೊಲೀಸರ ಕಟ್ಟುನಿಟ್ಟಿನ ಸೂಚನೆ**
 ಮಂಗಳೂರು ದಸರಾ ಮೆರವಣಿಗೆಯ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು
ಪಾಲಿಸುವುದು, ಮೆರವಣಿಗೆ ಮಾರ್ಗಗಳಲ್ಲಿ ವಾಹನ ನಿಲುಗಡೆ ಮಾಡದಿರುವುದು ಹಾಗೂ ಪೊಲೀಸ್ ಸಿಬ್ಬಂದಿಯ 
ಸೂಚನೆಗಳಿಗೆ ಸಹಕರಿಸುವುದು ಕಡ್ಡಾಯವಾಗಿದೆ. ಸಂಚಾರ ದಟ್ಟಣೆಯಿಂದ ತೊಂದರೆಯಾಗದಂತೆ ಸಾರ್ವಜನಿಕರು 
ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಮಂಗಳೂರು ನಗರ ಪೊಲೀಸ್‌ ಆಯುಕ್ತರು ಮನವಿ ಮಾಡಿದ್ದಾರೆ.

Advertisement
