# ನಿನಗಾಗಿ ಎರಡು ಪ್ರಶ್ನೆ ಪತ್ರಿಕೆಗಳನ್ನು ತಂದಿಟ್ಟಿದ್ದೇನೆ ಡಾರ್ಲಿಂಗ್’ – ಲೈಂಗಿಕವಾಗಿ ಬಳಸಿಕೊಳ್ಳಲು ವಿದ್ಯಾರ್ಥಿನಿಗೆ ಯೂನಿವರ್ಸಿಟಿ ಪ್ರೊಫೆಸರ್ ಆಮಿಷ

- Link: https://hosakannada.com/news/i-brought-two-question-papers-for-you-darling-university-professor-lures-student-to-physically-miss-us-him/
- Published: 2026-05-16T14:04:46+00:00
- Author: ಹೊಸಕನ್ನಡ ನ್ಯೂಸ್

ಪ್ರಶ್ನೆಪತ್ರಿಕೆ ಸೋರಿಕೆ ಮಾಡಿಕೊಡುವುದಾಗಿ ಹೇಳಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ
ಲಕ್ನೋ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 

Sponsored

ದೇಶಾದ್ಯಂತ ನೀಟ್-ಯುಜಿ (NEET UG 2026) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಸಿಬಿಐ
ವಹಿಸಿಕೊಂಡು ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ, ಲಕ್ನೋ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಈ 
ಘಟನೆ ನಡೆದಿದೆ. ಬಿ.ಎಸ್ಸಿ ಪ್ರಾಣಿಶಾಸ್ತ್ರ (Zoology) ವಿಭಾಗದ ಸಹಾಯಕ ಪ್ರಾಧ್ಯಾಪಕ ಪರಮ್‌ಜಿತ್
ಸಿಂಗ್ ಬಂಧಿತ ಆರೋಪಿಯಾಗಿದ್ದು, ಈತನ ಆಡಿಯೋ ರೆಕಾರ್ಡಿಂಗ್ ಬಹಿರಂಗಗೊಂಡ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

Advertisement

Advertisement

ಸಂತ್ರಸ್ತ ವಿದ್ಯಾರ್ಥಿನಿಯು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಸಲ್ಲಿಸಿರುವ ಆಡಿಯೋ ರೆಕಾರ್ಡಿಂಗ್‌ನಲ್ಲಿ“
ನಿನಗಾಗಿ ಎರಡು ಪ್ರಶ್ನೆ ಪತ್ರಿಕೆಗಳನ್ನು ತಂದಿಟ್ಟಿದ್ದೇನೆ ಡಾರ್ಲಿಂಗ್, ನನ್ನನ್ನು ಭೇಟಿಯಾಗಲು 
ಯಾವಾಗ ಬರುತ್ತೀಯಾ?” ಎಂದು ಪ್ರೊಫೆಸರ್ ಕೇಳಿರುವುದು ಆ ರೆಕಾರ್ಡಿಂಗ್‌ನಲ್ಲಿ ದಾಖಲಾಗಿದೆ. ಇದಕ್ಕೆ
ಉತ್ತರಿಸಿರುವ ವಿದ್ಯಾರ್ಥಿನಿ, “ನಾನು ಈಗಾಗಲೇ ಪಠ್ಯಕ್ರಮವನ್ನು ಓದಿ ಮುಗಿಸಿದ್ದೇನೆ, ನನಗೆ ಪ್ರಶ್ನೆ
ಪತ್ರಿಕೆ ಬೇಡ” ಎಂದು ನಿರಾಕರಿಸಿದ್ದಾಳೆ. ಆದರೂ ಬಿಡದ ಪ್ರೊಫೆಸರ್, ಪರೀಕ್ಷೆಗೆ ಏಳು ದಿನ ಬಾಕಿ ಇರುವಾಗ
ನನ್ನನ್ನು ಬಂದು ಭೇಟಿಯಾಗು ಎಂದು ಒತ್ತಾಯಿಸಿದ್ದಾನೆ. ಕರೆಯನ್ನು ಕಡಿತಗೊಳಿಸಿದ ನಂತರ, ಪ್ರೊಫೆಸರ್
ಮತ್ತೊಮ್ಮೆ ಲೈಂಗಿಕ ದೌರ್ಜನ್ಯಕ್ಕೊಳಪಡಿಸುವ ಉದ್ದೇಶದಿಂದಲೇ ನನ್ನನ್ನು ಕರೆಯುತ್ತಿದ್ದ ಎಂದು ವಿದ್ಯಾರ್ಥಿನಿ
ಅಳಲು ತೋಡಿಕೊಂಡಿದ್ದಾಳೆ.

ವಿದ್ಯಾರ್ಥಿನಿ ನೀಡಿದ ಆಡಿಯೋ ಸಾಕ್ಷ್ಯಗಳನ್ನು ಆಧರಿಸಿ ಲಕ್ನೋ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರು
ಸ್ಥಳೀಯ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯದ
ಉಪಕುಲಪತಿ ಜೆ.ಪಿ. ಸೈನಿ ಅವರು, ಪ್ರಕರಣದ ತನಿಖೆ ನಡೆಸಿ ಕೇವಲ 24 ಗಂಟೆಗಳ ಒಳಗಾಗಿ ವರದಿ ಸಲ್ಲಿಸುವಂತೆ
ಆಂತರಿಕ ದೂರುಗಳ ಸಮಿತಿಗೆ (ICC) ಆದೇಶಿಸಿದ್ದಾರೆ.

Advertisement
