# ಹೆಂಡ್ತಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲವೆಂದು ಧರಣಿ ಕುಳಿತ ಗಂಡ!

- Link: https://hosakannada.com/news/husband-stages-a-protest-because-his-wife-hasnt-received-the-gruha-lakshmi-money/
- Published: 2026-07-22T15:20:40+00:00
- Author: ಹೊಸಕನ್ನಡ ನ್ಯೂಸ್

ಕೊಪ್ಪಳ ಜು.22: ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆ ಅಡಿ ದೊರಕುವ ರೂ.2000 ತನ್ನ ಪತ್ನಿಗೆ ಬಂದಿಲ್ಲ
ಎಂದು ಪತಿಯೊಬ್ಬರು ಜಿಲ್ಲಾಡಳಿತ ಭವನದ ಮುಂದೆ ಏಕಾಂಗಿಯಾಗಿ ಪ್ರತಿಭಟನೆಗೆ ಕುಳಿತಿರುವ ಕುರಿತು ವರದಿಯಾಗಿದೆ.

Sponsored

ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೋವಿ ಅವರ ಪತ್ನಿ ಶಿಲ್ಪಾ ಭೋವಿ ಅವರು ಸರಕಾರಿ ಶಾಲೆಯಲ್ಲಿ
ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಯೋಜನೆ ಜಾರಿಯಾದಾಗಿನಿಂದ ಶಿಲ್ಪಾ ಅವರಿಗೆ ಗೃಹಲಕ್ಷ್ಮಿ
ಯೋಜನೆಯ ಹಣ ಖಾತೆಗೆ ಜಮೆಯಾಗಿಲ್ಲ. ಇದರಿಂದ ಬೇಸತ್ತ ಪತಿ ಶರಣಪ್ಪ, ಇಂದು ಜಿಲ್ಲಾಧಿಕಾರಿಗಳ ಕಚೇರಿ
ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement

Advertisement

ಕಳೆದ ಮೂರು ವರ್ಷಗಳಿಂದ ಹಣ ಪಡೆಯಲು ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಮತ್ತು ತಾಂತ್ರಿಕ ದೋಷಗಳನ್ನು
ಸರಿಪಡಿಸಲು ಕಚೇರಿಗಳಿಗೆ ಅಲೆದಾಡಿದ್ದಾರೆ. ಈ ಅಲೆದಾಟಕ್ಕೆ ಅವರು ಇದುವರೆಗೆ ಬರೋಬ್ಬರಿ ರೂ.25,000
ಖರ್ಚು ಮಾಡಿದ್ದಾರೆ. ಪದೇ ಪದೇ ಅರ್ಜಿ ಸಲ್ಲಿಸಿದರೂ ಫಲ ಸಿಗದಿದ್ದಾಗ, ತಾನು ಖರ್ಚು ಮಾಡಿ ರೂ.25000
ಹಣ ಸರಕಾರ ವಾಪಸ್‌ ನೀಡಲಿ ಎಂದು ಅವರು ಮುಖ್ಯಮಂತ್ರಿಗಳು ಮತ್ತು ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ
ಬರೆದಿದ್ದಾರೆ.

Advertisement
