# ಜಗಳದ ಭರದಲ್ಲಿ ಕೋಪದಿಂದ ಮೊಬೈಲ್‌ ಫೋನ್‌ ಎಸೆದ ಪತ್ನಿ-ಪತಿ ಸಾವು

- Link: https://hosakannada.com/news/husband-dies-after-wife-throws-mobile-phone-in-anger-during-an-argument/
- Published: 2026-07-13T18:52:16+00:00
- Author: ಹೊಸಕನ್ನಡ ನ್ಯೂಸ್

ಗಂಡ ಹೆಂಡತಿ ಜಗಳದ ಭರದಲ್ಲಿ ಕೋಪದಿಂದ ಮೊಬೈಲ್‌ ಫೋನನ್ನು ಪತ್ನಿ ಎಸೆದಿದ್ದು, ಅದು ಗಂಡನ ತಲೆಗೆ 
ಬಡಿದು ಸಾವಿಗೀಡಾಗಿರುವ ಘಟನೆ ಒಡಿಶಾದ ಬೋಲಂಗಿರ್‌ ಜಿಲ್ಲೆಯಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಸಂದರ್ಭದಲ್ಲಿ
ಈ ಘಟನೆ ನಡೆದಿದೆ.

Sponsored

ಮನೆಯಲ್ಲಿ ಪತಿ ಮತ್ತು ಪತ್ನಿ ನಡುವೆ ಜಗಳ ಉಂಟಾಗಿದ್ದು, ಈ ಜಗಳದಲ್ಲಿ ಪತ್ನಿ ಮೊಬೈಲ್‌ ಫೋನ್‌ನಿಂದ
ತನ್ನ ಪತಿಯ ತಲೆಗೆ ಎಸೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

Advertisement

ಗಾಯಾಳು ಪತಿಯನ್ನು ಕುಟುಂಬದವರು ಜಿಲ್ಲಾ ಪ್ರಧಾನ ಕಚೇರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿ 
ಸುಧಾರಣೆ ಕಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು. ಆದರೆ ವಿಧಿಯಾಟವೇ ಬೇರಿತ್ತು. ಮನೆಗೆ ತಲುಪಿದ
ಸ್ವಲ್ಪ ಸಮಯದ ನಂತರ, ಪತಿಯ ಆರೋಗ್ಯದಲ್ಲಿ ಇದಕ್ಕಿದ್ದಂತೆ ಹದಗೆಟ್ಟಿದ್ದು, ಕೂಡಲೇ ಆತನನ್ನು ಬಲಂಗೀರ್‌
ಜಿಲ್ಲಾ ಪ್ರಧಾನ ಕಚೇರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರ ಉತ್ತಮ ಚಿಕಿತ್ಸೆಯ ನಂತರವೂ ಪತಿ
ನಿಧನ ಹೊಂದಿದ್ದಾನೆ.

ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದ್ದು, ಮರಣೋತ್ತರ ವರದಿ ಬಂದ ನಂತರವೇ ಸಾವಿಗೆ ಕಾರಣವೇನು
ಎಂದು ತಿಳಿದು ಬರಲಿದೆ.

Advertisement
