# ಖರ್ಚಿಗೆ 5,000 ಕೇಳಿದ ಹೆಂಡತಿಗೆ ಹೊಡೆದ ಗಂಡ  – 5 ಅಲ್ಲ ತಿಂಗಳಿಗೆ 10,000 ನೀಡುವಂತೆ ಕೋರ್ಟ್ ಆದೇಶ !!

- Link: https://hosakannada.com/news/husband-beats-wife-for-asking-for-5-000-in-expenses-court-orders-him-to-pay-10-000-per-month-not-5/
- Published: 2026-07-24T12:01:04+00:00
- Author: ಹೊಸಕನ್ನಡ ನ್ಯೂಸ್

ಮನೆ ಖರ್ಚಿಗೆಂದು ಐದು ಸಾವಿರ ರುಪಾಯಿ ಕೇಳಿದಕ್ಕೆ ವಯಸ್ಸಾದ ತನ್ನ ಪತ್ನಿಗೆ ಹೊಡೆದ ಪತಿಗೆ ಹೈಕೋರ್ಟ್
ಶಾಕ್ ನೀಡಿದ್ದು ತಿಂಗಳಿಗೆ 5,000 ಅಲ್ಲ, ಬದಲಿಗೆ 10,000 ರೂಪಾಯಿಯನ್ನು ಕೊಡಬೇಕು ಎಂದು ಕಟ್ಟಪ್ಪಣೆ
ಮಾಡಿದೆ.

Sponsored

 ಬೆಂಗಳೂರಿನ ಬಸವೇಶ್ವರನಗರದ 73 ವರ್ಷದ ನಿವಾಸಿ ಒಬ್ಬರು ತನ್ನ 65 ವರ್ಷದ ಪತ್ನಿ ಜೀವನ ನಡೆಸಲು ತಿಂಗಳಿಗೆ
5000 ಕೇಳಿದಳು ಎಂದು ಚೆನ್ನಾಗಿ ಹೊಡೆದಿದ್ದರು. ಹೆಂಡತಿ ಈ ಬಗ್ಗೆ ದೂರು ದಾಖಲಿಸಿ, ಈ ಪ್ರಕರಣ ಕೋರ್ಟ್
ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಮಧ್ಯಂತರ
ಆದೇಶ ಮಾಡಿದ್ದು, ಹೆಂಡತಿಗೆ ಹೊಡೆದ ತಪ್ಪಿಗಾಗಿ 5000 ಬದಲು ಪ್ರತಿ ತಿಂಗಳು 10 ಸಾವಿರ ರೂಪಾಯಿ ಜೀವನ
ಅಂಶ ಕೊಡಬೇಕು ಎಂದು ತಾಕೀತು ಮಾಡಿದೆ.

Advertisement

Advertisement

ಇದಕ್ಕೂ ಮುನ್ನ ವೃದ್ಧ ಪತಿಯ ಪರ ವಕೀಲರು ಹಾಜರಾಗಿ , ಅರ್ಜಿದಾರು ಹಾಗೂ ದೂರುದಾರರು ವಯೋವೃದ್ಧ ದಂಪತಿ.
ಅರ್ಜಿದಾರ ಪತಿಗೆ 73 ವರ್ಷ. ಪತ್ನಿಗೆ 65 ವರ್ಷ. ದಂಪತಿಗೆ ವಯಸ್ಕ ಒಂದು ಗಂಡು ಮತ್ತು ಒಂದು ಹೆಣ್ಣು
ಮಕ್ಕಳಿದ್ದಾರೆ. ಮನೆ ಖರ್ಚಿಗೆಂದು ಹಣ ಕೇಳಿದರು ಎಂಬ ಕಾರಣಕ್ಕೆ ಪತಿ – ಪತ್ನಿ ನಡುವೆ ಬಾಯಿ ಮಾತಿನಲ್ಲಿ
ಗಲಾಟೆ ಆಗಿದೆ ಎಂದರು. 

ಅದಾಗಲೇ ಅರ್ಜಿ ಹಾಗೂ ಪತ್ನಿ ದಾಖಲಿಸಿದ್ದ ದೂರಿನ ಅಂಶಗಳನ್ನು ಓದಿದ್ದ ನ್ಯಾಯಮೂರ್ತಿಗಳು, ಮನೆ ಖರ್ಚಿಗೆ
ಹಣ ಕೇಳಿದರೆ, 73 ವರ್ಷದಲ್ಲೂ ಅರ್ಜಿದಾರರು ಪತ್ನಿಗೆ ಬೈಯ್ದು ಹೊಡೆಯುತ್ತಾರೆಯೇ? ಹೊಡೆಯೋದು ಹಾಗೂ
ಬೈಯ್ಯುವುದಕ್ಕೆ ವಯಸ್ಸಿನ ಮಿತಿ ಇಲ್ಲವಲ್ಲ ಎಂದು ಹೇಳುತ್ತಿರಾ 65 ವರ್ಷದ ಪತ್ನಿಯು ಪತಿಯ ವಿರುದ್ಧ
ಹಲ್ಲೆ ಮಾಡಿ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ. ಪತಿ ಈ ವಯಸ್ಸಿನಲ್ಲೇ ಈ ರೀತಿಯಲ್ಲಿ ವರ್ತಿಸುವುದಾದರೆ
ಹಿಂದೆಲ್ಲಾ ಇನ್ನು ಯಾವ ಮಾದರಿಯಲ್ಲಿ ನಡೆದುಕೊಂಡಿರಬೇಕು ಎಂದು ತೀಕ್ಷ್ಣವಾಗಿ ಪ್ರಶ್ನಿಸಿ, ಹೆಂಡತಿ
ಕೇಳಿದ್ದಕ್ಕಿಂತ ಹೆಚ್ಚು ಹಣವನ್ನು ನೀಡಿ ಈ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಈ ತೀರ್ಪನ್ನು
ನೀಡಿದ್ದಾರೆ.

Advertisement
