# ತುಳುವರಿಗೆ ಸಸಸ ಸನ್ಮಾನ: ಸರ್ಕಾರಕ್ಕೆ ಸೊಲ್ಮೆಲು: ರಾಜ್ಯದ 2 ನೇ ಅಧಿಕೃತ ಭಾಷೆಯಾಗಿ ತುಳು!

- Link: https://hosakannada.com/news/huge-respect-to-tulu-people-a-slap-to-the-government-tulu-as-the-2nd-official-language-of-the-state/
- Published: 2026-09-18T17:41:24+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು,ಸೆ.18:ಐತಿಹಾಸಿಕ ಕ್ಷಣವೊಂದಕ್ಕೆ ಮಂಗಳೂರು ಇಂದು ಸಾಕ್ಷಿಯಾಯಿತು. ಭಾರತದ ಅಷ್ಟೇ ಅಲ್ಲ,
ಇಡೀ ವಿಶ್ವದ ಅತ್ಯಂತ ಗಾಢ ಸಾಂಸ್ಕೃತಿಕ ಹಿನ್ನೆಲೆಯ, ಜಾನಪದ ನೆಲದಿಂದ ಎದ್ದು ಬಂದ ಆಚರಣೆ ಕಲೆ, ಭಾಷೆ,
ಸಾಹಿತ್ಯ ಇತ್ಯಾದಿ ಹಲವಾರು ಪ್ರಕಾರಗಳಲ್ಲಿ ವಿಶ್ವದಲ್ಲೇ ಗಮನ ಸೆಳೆದಿರುವ ಪುಣ್ಯಭೂಮಿ ತುಳುನಾಡಿಗೆ
ಇಂದು ಇತಿಹಾಸದಲ್ಲಿ ಒಂದು ಸ್ವರ್ಣ ದಿನ.

Sponsored

ಮೂರು ಗಂಟೆಗಳ ಕಾಲ ನಡೆದ ಸಚಿವ ಸಂಪುಟ ಸಭೆಯ (ಸಸಸ) ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ 
ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ತುಳುವಿಗೆ ರಾಜ್ಯದ 2ನೇ ಅಧಿಕೃತ ಭಾಷಾ ಸ್ಥಾನಮಾನ ನೀಡುವ ನಿರ್ಧಾರ
ಕೈಗೊಂಡಿದ್ದಾರೆ.

Advertisement

Advertisement

ಕರ್ನಾಟಕದಲ್ಲಿ ತುಳು ಭಾಷೆಯನ್ನು ಎರಡನೆಯ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಇಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ
ಅಕ್ಕನಂತಿರುವ ಕನ್ನಡದ ಪಕ್ಕದಲ್ಲಿ ತುಳು ತಂಗಿ ಇವತ್ತು ಹೆಮ್ಮೆಯಿಂದ ನಿಂತುಕೊಂಡಿದ್ದಾಳೆ. ರಾಜ್ಯದ
ಎರಡನೆಯ ಅಧಿಕೃತ ಭಾಷೆಯಾಗಿ ಯಾಜಾಜ್ಞೆಯಾದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಈ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕರ್ನಾಟಕ ಸರ್ಕಾರವನ್ನು ಸಮಸ್ತ ತುಳುನಾಡು ಜನತೆ ಅಭಿನಂದಿಸಿದೆ.

 

Advertisement
