# ಮೇ 1 ರಿಂದ ‘LPG’ ಬುಕಿಂಗ್‌ನಲ್ಲಿ ಭಾರಿ ಬದಲಾವಣೆ

- Link: https://hosakannada.com/news/huge-change-in-lpg-bookings-from-may-1/
- Published: 2026-04-27T12:30:44+00:00
- Author: ಹೊಸಕನ್ನಡ ನ್ಯೂಸ್

ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ವಾತಾವರಣದಿಂದಾಗಿ ಜಗತ್ತಿನಾದ್ಯಂತ ಎಲ್ ಪಿ
ಜಿ ಸಮಸ್ಯೆ ದೊಡ್ಡ ಮಟ್ಟದಲ್ಲಿ ಉಂಟಾಗಿದೆ. ಭಾರತದಲ್ಲಿ ಇನ್ನೂ ಇದರ ಸಮಸ್ಯೆಗೆ ಅಂತ್ಯ ದೊರಕಿಲ್ಲ.
ಈ ನಡುವೆ ಮೇ 1 ರಿಂದ ‘LPG’ ಬುಕಿಂಗ್‌ನಲ್ಲಿ ಭಾರಿ ಬದಲಾವಣೆ ಆಗಲಿದೆ.

Sponsored

**_ಮೇ 1 ರಿಂದ ಆಗುವ ಬದಲಾವಣೆಗಳು:_**

Advertisement

Advertisement

**ಬೆಲೆ ಬದಲಾವಣೆ: **

ಮೇ 1, 2026 ರಿಂದ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.

**ಬುಕಿಂಗ್ ಅಂತರ: **

ಎರಡು ಸಿಲಿಂಡರ್ ಬುಕಿಂಗ್‌ಗಳ ನಡುವೆ ಕನಿಷ್ಠ 25 ದಿನಗಳ ಅಂತರ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.

**ಖಾಯಂ ಒಟಿಪಿ ನಿಯಮ:**

ಒಟಿಪಿ ಆಧಾರಿತ ವಿತರಣಾ ವ್ಯವಸ್ಥೆಯನ್ನು ಇನ್ಮುಂದೆ ಕಾಯಂ ಮಾಡಲಾಗುವುದು. ನೋಂದಾಯಿತ ಮೊಬೈಲ್ ಸಂಖ್ಯೆಗೆ
ಬರುವ ಒಟಿಪಿ ನೀಡಿದ ನಂತರವಷ್ಟೇ ಸಿಲಿಂಡರ್ ವಿತರಿಸಲಾಗುವುದು.

**ಹೊಸ ಸಂಪರ್ಕ ಸ್ಥಗಿತ: **

ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಗ್ಯಾಸ್ ಸಂಪರ್ಕ ನೀಡುವುದನ್ನು ತಾತ್ಕಾಲಿಕವಾಗಿ
ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪರಿಸ್ಥಿತಿ ಸುಧಾರಿಸಿದ ನಂತರ ಈ ನಿರ್ಧಾರವನ್ನು
ಹಿಂಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
