# ಹಾಸ್ಟೆಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ : 10 ವಿದ್ಯಾರ್ಥಿಗಳಿಗೆ ಗಾಯ

- Link: https://hosakannada.com/news/hostel-gas-cylinder-blast/
- Published: 2022-03-07T18:01:28+00:00
- Author: Praveen Chennavara

ಹಾಸ್ಟೆಲ್ ಒಳಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಹತ್ತು ವಿದ್ಯಾರ್ಥಿಗಳು ಗಾಯಗೊಂಡ ಘಟನೆ 
ಉತ್ತರ ಪ್ರದೇಶದ ಬುಲಂದ್ ಶಹರ್ ನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಲ್ಲಿ ನಡೆದಿದೆ.

Sponsored

ಹಾಸ್ಟೆಲ್ ನ ಅಡುಗೆ ಕೋಣೆಯೊಳಗೆ ಆಹಾರ ತಯಾರಿಸುವಾಗ 5 ಕೆಜಿ ತೂಕದ ಸಣ್ಣ ಗಾತ್ರದ ಸಿಲಿಂಡರ್ ಸ್ಫೋಟಗೊಂಡು
ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

Advertisement

Advertisement

ಗಾಯಗೊಂಡವರನ್ನು ಚಿಕಿತ್ಸೆಗೆ ಅಲಿಘರ್ ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾ
ಮ್ಯಾಜಿಸ್ಟ್ರೇಟ್ ಚಂದ್ರಪ್ರಕಾಶ್ ಸಿಂಗ್ ಮಾಹಿತಿ ನೀಡಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಅಲಿಘರ್ ನ ಮುಖ್ಯ ವೈದ್ಯಕೀಯ ಅಧಿಕಾರಿಯೊಂದಿಗೆ
ಡೆಪ್ಯೂಟಿ ಕಲೆಕ್ಟರ್‌ ಆಸ್ಪತ್ರೆಯಲ್ಲಿ ಹಾಜರಿದ್ದಾರೆಎಂದು ಅವರು ಮಾಹಿತಿ ನೀಡಿದ್ದಾರೆ.

Advertisement
