# ಹೊನ್ನಾವರ: ತೆಲುಗು ಸಿನಿಮಾ ಚಿತ್ರೀಕರಣದ ವೇಳೆ ತುಂಡಾದ ತೂಗು ಸೇತುವೆ

- Link: https://hosakannada.com/news/honnavar-swing-bridge-collapsed-during-telugu-movie-shooting/
- Published: 2026-10-08T09:57:06+00:00
- Author: ಹೊಸಕನ್ನಡ ನ್ಯೂಸ್

ಹೊನ್ನಾವರ: ಸಿನಿಮಾ ಶೂಟಿಂಗ್‌ ನ ಕ್ಯಾಮರಾ ಟ್ರಾಲಿಯನ್ನು ತೂಗು ಸೇತುವೆ ಮೇಲೆ ತಂದ ಪರಿಣಾಮ ಸೇತುವೆ
ತುಂಡಾಗಿ ಬಿದ್ದ ಘಟನೆ ತಾಲೂಕಿನ ಖರ್ವಾ ಗ್ರಾಮದ ನಾಥ ಗೇರಿ-ಮೂಟೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ
ಬುಧವಾರ (ಅ.7) ನಡೆದಿದೆ.

Sponsored

ಆಂಧ್ರದ ಆರ್‌ ಕೆ ದುಗ್ಗಲ್‌ ಸ್ಟುಡಿಯೋಸ್‌ ತಂಡವು ತೆಲುಗು ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಮೋಟೆ
ತೂಗು ಸೇತುವೆ ಮೇಲೆ ಭಾರೀ ತೂಕದ ಚಿತ್ರೀಕರಣ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದು. ಈ ವೇಳೆ ಏಕಾಏಕಿ
ಸೇತುವೆ ಒಂದು ಬದಿಯ ಕಬ್ಬಿಣದ ಹಗ್ಗ ತುಂಡಾಗಿ ಸೇತುವೆ ಪಕ್ಕಕ್ಕೆ ವಾಲಿ, ಸಮೀಪದ ತೆಂಗಿನ ಮರಕ್ಕೆ 
ಸೇತುವೆ ಒಗಿದ್ದರಿಂದ ಪೂರ್ಣ ಪ್ರಮಾಣದಲ್ಲಿ ನದಿಗೆ ಉರುಳುವುದು ತಪ್ಪಿದೆ.

Advertisement

Advertisement

ಇದರಿಂದ ಸೇತುವೆ ಮೇಲಿದ್ದ ಚಿತ್ರತಂಡದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement
