# ಮಹಾನ್ ಮಾನವತಾವಾದಿ, ಹಿಂದೂ ಧರ್ಮದ ಸುಧಾರಕ ಶ್ರೀ ನಾರಾಯಣ ಗುರುಗಳಿಗೆ ಅನ್ಯಾಯ!! ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಾಯಣಗುರುಗಳ ಸ್ತಬ್ಧ ಚಿತ್ರ ತಿರಸ್ಕಾರ

- Link: https://hosakannada.com/news/hindu-and-narayana-guru/
- Published: 2022-01-17T10:46:26+00:00
- Author: ಹೊಸಕನ್ನಡ ನ್ಯೂಸ್

ರಾಷ್ಟ್ರಪಿತ ಮಹಾತ್ಮ ಗಾಂಧೀ, ಜ್ಞಾನಪೀಠ ರವೀಂದ್ರನಾಥ್ ಟಾಗೋರ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್
ಅವರೇ ಗೌರವಿಸಿದ್ದ ಅವಧೂತ, ಹಿಂದೂ ಧರ್ಮದ ಸುಧಾರಕ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಈ 
ಬಾರಿಯ ಗಣರಾಜ್ಯೋತ್ಸವದಲ್ಲಿ ಅವಕಾಶ ತಿರಸ್ಕರಿಸಿದ್ದು ಸದ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ 
ಭುಗಿಲೆದ್ದಿದೆ. ವಿಶ್ವಸಂತ, ಮಹಾನ್ ಮಾನವತಾವಾದಿ ಅವಧೂತ ನಾರಾಯಣ ಗುರುಗಳಿಗೆ ಆದ ಅನ್ಯಾಯದ ಬಗ್ಗೆ
ಸಾಂದೀಪನಿ ಸಾಧನಾಶ್ರಮ ಕೇಮಾರು ಇಲ್ಲಿಯ ಶ್ರೀಶ್ರೀ ಈಶ ವಿಠಲದಾಸ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Sponsored

![](https://hosakannada.com/wp-content/uploads/2022/01/IMG-20220117-WA0016.jpg)

ಶತಮಾನದ ಹಿಂದಿನಿಂದಲೂ ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು, ಹಿಂದೂ ಧರ್ಮದ ಸುಧಾರಣೆಗೆ ತಮ್ಮನ್ನು
ತಾವು ತೊಡಗಿಸಿಕೊಂಡಿದ್ದ ಮಹಾನ್ ಸಂತರ ಸ್ತಬ್ದ ಚಿತ್ರಕ್ಕೆ ಅನುಮತಿ ನೀಡಬೇಕು, ಈಗಾಗಲೇ ಅನುಮತಿ ತಿರಸ್ಕರಿಸಿದ
ಸಮಿತಿಯು ಕೂಡಲೇ ಈ ಬಗ್ಗೆ ಪುನರ್ ವಿಮರ್ಶಿಸಿ ಕ್ರಮ ಕೈಗೊಳ್ಳಬೇಕೆಂದು ಶ್ರೀಗಳು ಒತ್ತಾಯಿಸಿದ್ದಾರೆ.

Advertisement

Advertisement

**ವಿವಾದಕ್ಕೆ ಕಾರಣವೇನು!?**

ಪ್ರತೀ ಬಾರಿಯೂ ರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ದ ಚಿತ್ರಗಳು ಪ್ರದರ್ಶನಗೊಳುತ್ತಿದ್ದೂ,
ಈ ಬಾರಿ ಕೇರಳ ರಾಜ್ಯ ಕಳುಹಿಸಿದ್ದ ಚಿತ್ರವು ತೀರಸ್ಕೃತಗೊಂಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಕೇರಳದ ಸ್ತಬ್ಧ ಚಿತ್ರದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯದೊಂದಿಗೆ ಜಟಾಯು ಪಕ್ಷಿ ಹಾಗೂ ಹಿಂದೂ ಧರ್ಮದ
ಸುಧಾರಕ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಸಿದ್ಧಪಡಿಸಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದ ಕೇಂದ್ರವು,
ನಾರಾಯಣ ಗುರುಗಳ ಬದಲಾಗಿ ಶಂಕರಾಚಾರ್ಯರ ಪ್ರತಿಮೆಯ ಬಳಕೆಗೆ ಸೂಚಿಸಿತ್ತು. ಇದಾದ ಬಳಿಕ ಕೇರಳದ ಸ್ತಬ್ಧ
ಚಿತ್ರಕ್ಕೆ ಅನುಮತಿ ತಿರಸ್ಕರಿಸಲಾಗಿದೆ.

Advertisement
