# ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಘೋರ ದುರಂತ ; ರಾಜ್ಯಪಾಲ ಗೆಹ್ಲೋಟ್ ಕಾರು ಚಾಲಕ ಹೃದಯಾಘಾತಕ್ಕೆ ಬಲಿ

- Link: https://hosakannada.com/news/heart-attack-2/
- Published: 2022-12-11T12:33:46+00:00
- Author: ಕೆ. ಎಸ್. ರೂಪಾ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಅವರ ಕಾರು ಚಾಲಕ ನಿನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರವಿಕುಮಾರ್ ಎಸ್. ಕಾಳೆ ಮೃತಪಟ್ಟ
ದುರ್ದೈವಿ ಕಾರು ಚಾಲಕ. ಮಧ್ಯ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರನ್ನು
ಕರೆದೊಯ್ಯಲು ಚಾಲಕ ರವಿಕುಮಾರ್ ಬಂದಿದ್ದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರನ್ನ ಕಾರಿನಲ್ಲಿ
ಕರೆದೊಯ್ಯಲು ಸಿದ್ದತೆ ಮಾಡಿಕೊಳ್ಳುವ ವೇಳೆ ಚಾಲಕ ರವಿಕುಮಾರ್ ಗೆ ಎದೆ ನೋವು ಕಾಣಿಸಿಕೊಂಡಿದೆ. ಈ 
ಮಧ್ಯೆ ಆತನಿಗೆ ಹೃದಯಾಘಾತವೂ ಆಗಿದೆ. ತಕ್ಷಣ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ
ಆತ ಕೊನೆಯುಸಿರೆಳೆದಿದ್ದಾರೆ

Sponsored

Advertisement

Advertisement

Advertisement
