# Mahindra SUV: GST ಹಾಗೂ ನವರಾತ್ರಿ ಎಫೆಕ್ಟ್ – ಶೇ. 60 ರಷ್ಟು ಏರಿಕೆ ಕಂಡ ಮಹೀಂದ್ರಾ SUV ಮಾರಾಟ!!

- Link: https://hosakannada.com/news/gst-and-navratri-effect-mahindra-suv-sales-increase-by-60-percent/
- Published: 2025-10-05T15:38:33+00:00
- Author: ಹೊಸಕನ್ನಡ ನ್ಯೂಸ್

Mahindra SUV: ನವರಾತ್ರಿ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರು-ಬೈಕುಗಳ ಮಾರಾಟದಲ್ಲಿ ಭರ್ಜರಿ ಏರಿಕೆ
ಕಂಡಿದೆ. ಅದರಲ್ಲೂ ಮಹೀಂದ್ರಾ & ಮಹೀಂದ್ರಾ ತನ್ನ ವಾಹನಗಳ ಬಂಪರ್ ಮಾರಾಟವನ್ನು ಮಾಡಿದೆ.

Sponsored

ಹೌದು, ದಸರಾ ಹಬ್ಬದ ಪ್ರಯೋಜನಗಳ ಜೊತೆಗೆ, ಜಿಎಸ್‌ಟಿ ದರ ಇಳಿಕೆಯಿಂದ ಎಸ್‌ಯುವಿಗಳ ಬೆಲೆಗಳು ಕಡಿಮೆಯಾದ
ಕಾರಣ ವಾಹನ ಪ್ರಿಯರು ಮಹೀಂದ್ರಾ ಶೋರೂಮ್‌ಗೆ ತೆರಳಿದ ದೊಡ್ಡ ಪ್ರಮಾಣದಲ್ಲಿ ಬುಕ್ ಮಾಡಿದ್ದಾರೆ.

Advertisement

Advertisement

[ಇದನ್ನೂ ಓದಿ;Kantara-1: ರಾಷ್ಟ್ರಪತಿ ಭವನದಲ್ಲಿ ಕಾಂತಾರ-1 ಚಿತ್ರ ಪ್ರದರ್ಶನ !!](https://hosakannada.com/2025/10/05/kantara-1-film-screening-at-rashtrapati-bhavan/)

ಮಹೀಂದ್ರಾ & ಮಹೀಂದ್ರಾ ಸೆಪ್ಟೆಂಬರ್‌ನಲ್ಲಿ ಒಟ್ಟು 100,298 ಯುನಿಟ್‌ಗಳ ಮಾರಾಟವನ್ನು ವರದಿ ಮಾಡಿದೆ,
ಇದು ಸೆಪ್ಟೆಂಬರ್ 2024 ಕ್ಕೆ ಹೋಲಿಸಿದರೆ 16% ಹೆಚ್ಚಳವಾಗಿದೆ. ಹಬ್ಬದ ಋತುವಿನಲ್ಲಿ ವಾಹನ ಬೇಡಿಕೆ
ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ. ನವರಾತ್ರಿಯ ಮೊದಲ ಒಂಬತ್ತು ದಿನಗಳಲ್ಲಿ ಎಸ್‌ಯುವಿ
ಚಿಲ್ಲರೆ ಮಾರಾಟವು 60% ಕ್ಕಿಂತ ಹೆಚ್ಚು ಹೆಚ್ಚಾಗಿದೆ. ಅದೇ ರೀತಿ, ವಾಣಿಜ್ಯ ವಾಹನಗಳ ಚಿಲ್ಲರೆ ಮಾರಾಟವು
ಸಹ 70% ಕ್ಕಿಂತ ಹೆಚ್ಚು ಹೆಚ್ಚಾಗಿದೆ.

Advertisement
