# Gruha Lakshmi Scheme: ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ರೂ, ಯೋಜನೆ ಜಾರಿಯಾದ್ರೂ ಇನ್ನೂ ಖಾತೆಗೆ ಹಣ ಬಂದಿಲ್ಲವೇ ?! ಹಾಗಿದ್ರೆ ತಪ್ಪದೇ ಈ ಸ್ಟೋರಿ ಓದಿ

- Link: https://hosakannada.com/news/gruha-lakshmi-scheme-money-and-here-is-the-story-of-money-deposited-in-to-account/
- Published: 2023-09-09T10:54:00+00:00
- Author: ಕೆ. ಎಸ್. ರೂಪಾ

Gruha Lakshmi Scheme : ಗೃಹಲಕ್ಷ್ಮೀ ಯೋಜನೆ(Gruha lakshmi) ಈಗಾಗಲೇ ಜಾರಿಯಾಗಿದ್ದು, ಫಲಾನುಭವಿ
ಮಹಿಳೆಯರ ಖಾತೆಗೆ ಮೊದಲ ತಿಂಗಳ 2 ಸಾವಿರ ರೂಪಾಯಿ ಜಮೆ ಆಗಿದೆ. ಆದರೆ ಅದೆಷ್ಟೋ ಗೃಹಲಕ್ಷ್ಮಿಯರಿಗೆ
ಇನ್ನೂ ಹಣ ಬಂದಿಲ್ಲ. ನಿಮಗೂ ಹಣ ಇನ್ನೂ ಬಂದಿಲ್ಲವೇ? ಹಾಗಿದ್ರೆ ಈ ಸ್ಟೋರಿ ನೋಡಿ.

Sponsored

**ಹಣ ಬರದಿರಲು ಕಾರಣವೇನು? ಇದನ್ನು ಓದಿ:**
 ಗೃಹನಿಯರೇ, ನಿಮ್ಮ ಬ್ಯಾಂಕ್ ಖಾತೆ(Bank account)
ಗೃಹಲಕ್ಷ್ಮಿ ಹಣ ಬಾರದೇ ಇರೋರು ಎರಡು ಸಾವಿರ ಹಣ ಜಮೆ ಆಗದೇ ಇರಲು ಕಾರಣವೇನು? ಡಿಬಿಡಿ ಸ್ಟೇಟಸ್ ಚೆಕ್
ಮಾಡೋದೇಗೆ? ಎಂಬ ಪ್ರಶ್ನೆಗೆ ಡಿಬಿಟಿ ಕರ್ನಾಟಕ ಆಪ್ ಮೂಲಕ ಡಿಬಿಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಲು 
ಸರ್ಕಾರ ಅವಕಾಶ ಮಾಡಿದೆ. ಅದನ್ನು ನೋಡಲು ಹೀಗೆ ಮಾಡಿ. • ನಿಮ್ಮ ಮೊಬೈಲ್ ಆಪ್ ನಲ್ಲಿ ಡಿಬಿಡಿ ಕರ್ನಾಟಕ
ಆಪ್ ಡೌನ್ ಲೋಡ್ ಮಾಡಿ. • ಆನಂತರ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಕೊಟ್ರೆ ಒಟಿಪಿ ಬರುತ್ತೆ.•
ಆನಂತರ ಅನ್ನಭಾಗ್ಯ ಡಿಬಿಟಿ ಚೆಕ್ ಮಾಡಬೇಕಾದರೆ ಬಿಪಿಎಲ್ ಕಾರ್ಡ್ ಸಂಖ್ಯೆ ಹಾಕಿ ಪರಿಶೀಲಿಸಿ. • ಗೃಹಲಕ್ಷ್ಮಿ
ಪರಿಶೀಲಿಸಲು ಅರ್ಜಿ ಸಂಖ್ಯೆ ಹಾಕಿದರೆ ಸ್ಟೇಟಸ್ ಸಿಗಲಿದೆ

Advertisement

Advertisement

**ಎಲ್ಲೆಲ್ಲಿ ಎಷ್ಟೆಷ್ಟು ಹಣ ಜಮಾ ಆಗಿದೆ?**
 ರಾಜ್ಯಾದ್ಯಂತ ಇದರ ಪ್ರಮಾಣ ಶೇ.45ರಷ್ಟು ಇದ್ದರೆ 
ರಾಜಧಾನಿ ಬೆಂಗಳೂರಿನಲ್ಲಿಯೇ ಇದರ ಶೇಕಡಾ 20ರಷ್ಟು ತಲುಪಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ
1,22,917 ಅರ್ಜಿಯಲ್ಲಿ 94,338 ಮನೆಯೊಡಿಗೆ ಹಣ ಸಂದಾಯ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ 5,27,768
ಅರ್ಜಿಯಲ್ಲಿ 69, 642 ಮನೆಯೊಡತಿಗೆ ಎರಡು ಸಾವಿರ ಹಣ ಸಂದಾಯವಾಗಿದೆ.

**ಅನ್ನಭಾಗ್ಯ(Anna bhagya) ಡಿಬಿಟಿ ಹಣ ಪರಿಶೀಲಿಸಲು ಈ ಆಪ್ ಬಳಕೆ ಆಗಲಿದೆ.**
 ಈ ಆಪ್ ನಲ್ಲಿ 
ರಾಜ್ಯದಲ್ಲಿ ಇದುವರೆಗೆ 1.13 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ನೋಂದಣಿ ಆಗಿದರೆ. ಇದರಲ್ಲಿ 44.52
ಲಕ್ಷ ಫಲಾನುಭವಿಗಳಿಗೆ ಎರಡು ಸಾವಿರ ಹಣ ಜಮೆ ಆಗಿದೆ. ಇನ್ನು, 69 ಲಕ್ಷ ಫಲಾನುಭವಿಗಳಿಗೆ ಎರಡು ಸಾವಿರ(
2,000) ಹಣ ಜಮೆ ಆಗಬೇಕಿದೆ. ಇದರಲ್ಲಿ 25 ಸಾವಿರ ಫಲಾನುಭವಿಗೆ ಜಮೆ ಆಗೋದು ಡೌಟ್! ಇನ್ನು ಹತ್ತು 
ದಿನದಲ್ಲಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಯ ಫಲಾನುಭವಿಗಳಿಗೆ ಜಮೆ ಆಗಲಿದೆ.

Advertisement
