# ಕರಾವಳಿ ಜಿಲ್ಲೆಗಳಿಗೆ ನಾಳೆ ಸರಕಾರಿ ರಜೆ! ಈದ್‌ ಮಿಲಾದ್‌ ಹಬ್ಬದ ರಜೆಯಲ್ಲಿ ಮಹತ್ವದ ಬದಲಾವಣೆ

- Link: https://hosakannada.com/news/government-holiday-tomorrow-for-coastal-districts-important-change-in-eid-milad-festival-holiday/
- Published: 2026-08-24T19:12:17+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು,ಆ.24: ರಾಜ್ಯಾದ್ಯಂತ ಆಚರಣೆ ಮಾಡಲಾಗುವ ಈದ್‌ಮಿಲಾದ್‌ ಹಬ್ಬದ ಸಾರ್ವಜನಿಕ ರಜಾ ದಿನಾಂಕದಲ್ಲಿ
ಮಹತ್ವದ ಬದಲಾವಣೆಯಾಗಿದೆ. ಕರಾವಳಿ ಭಾಗದ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿಗೆ
ನಾಳೆಯೇ (ಆ.25) ಸಾರ್ವಜನಿಕ ರಜೆ ಘೋಷಿಸಿ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ. ಉಳಿದಂತೆ ಇತರೆ
ಎಲ್ಲಾ ಜಿಲ್ಲೆಗಳಲ್ಲಿ ಬುಧವಾರ (ಆ.26) ರಜೆ ಮುಂದುವರಿಯಲಿದೆ.

Sponsored

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್‌ಗಳಿಗೆ
ಆಗಸ್ಟ್ 25ರಂದೇ ಈದ್ ಮಿಲಾದ್ ರಜೆ ಅನ್ವಯವಾಗಲಿದೆ.

Advertisement

Advertisement

ರಜೆ ಬದಲಾವಣೆಗೆ ಕಾರಣವೇನು?
 ರಾಜ್ಯ ಸರ್ಕಾರದ ಹಿಂದಿನ ಅಧಿಸೂಚನೆಯ ಪ್ರಕಾರ ಆಗಸ್ಟ್ 26ರಂದು ಈದ್
ಮಿಲಾದ್ ಅಂಗವಾಗಿ ರಾಜ್ಯಾದ್ಯಂತ ಸಾರ್ವಜನಿಕ ರಜೆ ಘೋಷಿಸಲಾಗಿತ್ತು. ಆದರೆ, ಕರಾವಳಿ ಭಾಗದಲ್ಲಿ ಚಂದ್ರದರ್ಶನ
ಹಾಗೂ ಸ್ಥಳೀಯ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ರಜಾ ದಿನವನ್ನು ಬದಲಾಯಿಸುವಂತೆ ದಕ್ಷಿಣ ಕನ್ನಡ ಹಾಗೂ
ಉಡುಪಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿದ್ದರು. ಜಿಲ್ಲಾಧಿಕಾರಿಗಳ
ಮನವಿಯನ್ನು ಪುರಸ್ಕರಿಸಿರುವ ಸರ್ಕಾರ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಆಗಸ್ಟ್ 26ರ ಬದಲಿಗೆ 
ಆಗಸ್ಟ್ 25ರಂದೇ ಸಾರ್ವಜನಿಕ ರಜೆ ಘೋಷಿಸಲು ಆಯಾ ಜಿಲ್ಲಾಧಿಕಾರಿಗಳ ಹಂತದಲ್ಲೇ ನಿಯಮಾನುಸಾರ ತೀರ್ಮಾನ
ಕೈಗೊಳ್ಳುವಂತೆ ನಿರ್ದೇಶನ ನೀಡಿ ಆದೇಶಿಸಿದೆ.

 

Advertisement
