# ಬೈಕ್‌ ಖರೀದಿಸುತ್ತೀರಾ ? ಹಾಗಾದರೆ ಸಿಗುತ್ತೆ 70,000 ಸಬ್ಸಿಡಿ | ಯಾವ ರೀತಿ ಪಡೆಯುವುದು ? ಇಲ್ಲಿದೆ ಸಂಪೂರ್ಣ ಮಾಹಿತಿ

- Link: https://hosakannada.com/news/government-has-announced-subsidy-for-buying-motorbike/
- Published: 2023-01-10T10:52:06+00:00
- Author: ಕೆ. ಎಸ್. ರೂಪಾ

ಇದೀಗ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನ ಉದ್ಯಮಶೀಲತಾ ಅಭಿವೃದ್ಧಿ
ಯೋಜನೆಗೆ ಈ ನಿಗಮದ ವ್ಯಾಪ್ತಿಗೆ ಒಳಪಡುವ ಉಪಜಾತಿಗಳಾದ ಅರ್ಹ ಫಲಾಪೇಕ್ಷಿತಗಳಿಂದ ದ್ವಿಚಕ್ರ / ತ್ರಿಚಕ್ರ
ವಾಹನ ಖರೀದಿಗೆ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Sponsored

2022-23ನೇ ಸಾಲಿನ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಇತರ ದ್ವಿಚಕ್ರ / ತ್ರಿಚಕ್ರ ವಾಹನ
ಖರೀದಿ (ಇ-ಕಾಮರ್ಸ್ ಅಡಿಯಲ್ಲಿ ಕಂಪನಿಗಳಿಂದ ಸರಕು / ಸಾಮಗ್ರಿಗಳು ತಲುಪಿಸಲು) ವಾಹನದ ಘಟಕ ವೆಚ್ಚದಲ್ಲಿ
ನಿಗಮದಿಂದ ರೂ. 50,000/- ಗಳು ಹಾಗೂ ರೂಪಾಯಿ 20,000ಗಳನ್ನು ಸಾಲದ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ.

Advertisement

Advertisement

ಈ ಮೇಲಿನ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳೇನು:

 * ಆರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದ್ದು ಹಾಗೂ ಕರ್ನಾಟಕ ರಾಜ್ಯದ ವಾಸಿಗಳಿಗೆ ಹಾಗೂ ಈ ನಿಗಮದ
   ವ್ಯಾಪ್ತಿಗೆ ಒಳಪಟ್ಟಿರುವ ಉಪಜಾತಿಗೆ ಸೇರಿರಬೇಕು.
 * ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದ ರೂ. 1.50,000/- ಮತ್ತು ನಗರ ಪ್ರದೇಶದಲ್ಲಿ
   ರೂ. 2,00,000/-ಗಳ ಮಿತಿಯಲ್ಲಿರಬೇಕು.
 * ಆರ್ಜಿದಾರರು ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ಕನಿಷ್ಠ 21 ವರ್ಷಗಳಿಂದ ಗರಿಷ್ಠ 50 ವರ್ಷದೊಳಗಿರಬೇಕು.
 * ಆರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಯೋಜನೆಗಳಲ್ಲಿ ಸಾಲ ಸೌಲಭ್ಯ
   ಪಡೆದಿರಬಾರದು ಮತ್ತು ಸರ್ಕಾರಿ/ಆರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
 * ಆರ್ಜಿದಾರರು ಸಂಬಂಧಿಸಿದ ವಾಹನ ಚಾಲನ ಪರವಾನಗಿ ಹೊಂದಿರಬೇಕು.

ಅರ್ಜಿ ಸಲ್ಲಿಸುವ ಕ್ರಮಗಳು :

ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಆಗಿರುವ https://sevasindhu.karnataka.gov.in ಗ್ರಾಮ 
ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರದಲ್ಲಿ ಆನ್‌ಲೈನ್ ಮುಖಾಂತರ ಆಸಕ್ತರು ಮೇಲಿನ ಯೋಜನೆಗಳಿಗೆ
ಅರ್ಜಿಗಳನ್ನು ಸಲ್ಲಿಸಬಹುದು. ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16.01.2023
ಆಗಿದೆ .

ಅರ್ಹರು ಈ ಮೇಲಿನ ಯೋಜನೆ ಅಡಿಯಲ್ಲಿ ನಿಯಮನುಸಾರ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

Advertisement
