# ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು 50 ಜನರಿಗೆ ಗಾಯ

- Link: https://hosakannada.com/news/goods-rail-accident-50-injured/
- Published: 2022-08-17T10:05:30+00:00
- Author: Praveen Chennavara

ಮಹಾರಾಷ್ಟ್ರ : ಗೊಂಡಿಯಾದಲ್ಲಿ ಮಧ್ಯರಾತ್ರಿ ಸುಮಾರು 2.30 ರ ಸುಮಾರಿಗೆ ಗೂಡ್ಸ್ ರೈಲಿಗೆ ಪ್ಯಾಸೆಂಜರ್
ರೈಲು ಡಿಕ್ಕಿ ಹೊಡೆದು 3 ಬೋಗಿಗಳು ಹಳಿ ತಪ್ಪಿದ ಪರಿಣಾಮ 50 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ
ಘಟನೆ ನಡೆದಿದೆ.

Sponsored

ಸರಿಯಾದ ಸಿಗ್ನಲ್ ಸಿಗದ ಪರಿಣಾಮ ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ
ಎನ್ನಲಾಗಿದೆ, ಘಟನೆಯಲ್ಲಿ ಹದಿಮೂರು ಮಂದಿ ಗಂಭೀರ ಗಾಯಗೊಂಡಿದ್ದು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ
ದಾಖಲಿಸಲಾಗಿದೆ ಮತ್ತು ಕೆಲವರನ್ನು ಗೊಂಡಿಯಾದಲ್ಲಿರುವ ಸರ್ಕಾರೀ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Advertisement

ಪ್ಯಾಸೆಂಜರ್ ರೈಲು ನಾಗ್ಪುರದಿಂದ ರಾಯ್ಪುರಕ್ಕೆ ತೆರಳುತ್ತಿತ್ತು ಎನ್ನಲಾಗಿದೆ, ಎರಡೂ ರೈಲುಗಳು ಒಂದೇ
ದಿಕ್ಕಿಗೆ ಪ್ರಯಾಣಿಸುತ್ತಿತ್ತು ಎನ್ನಲಾಗಿದೆ.

Advertisement
