# ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಚಿತ ವಿದ್ಯುತ್ ಯೋಜನೆ : ಆದೇಶ ಹಿಂಪಡೆದ ಸರಕಾರ

- Link: https://hosakannada.com/news/free-electricity-for-sc-st/
- Published: 2022-09-05T06:51:53+00:00
- Author: Praveen Chennavara

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) 
ಕುಟುಂಬಗಳಿಗೆ ‘ಅಮೃತ ಜ್ಯೋತಿ’ ಯೋಜನೆಯಡಿ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ಒದಗಿಸುವ ಕಾರ್ಯಕ್ರಮದ
ಮಾರ್ಗಸೂಚಿ ಪರಿಷ್ಕರಿಸಲು ಇಂಧನ ಇಲಾಖೆ ನಿರ್ಧರಿಸಿದೆ.

Sponsored

ಈ ಯೋಜನೆಯ ಜಾರಿಗೆ ಮೇ 18 ರಂದು ಆದೇಶ ಹೊರಡಿಸಲಾಗಿತ್ತು. ಫಲಾನುಭವಿಗಳ ಅರ್ಹತೆ, ಮಂಜೂರಾತಿ ಮತ್ತಿತರ
ವಿಷಯಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳುಳ್ಳ ಸುತ್ತೋಲೆಯನ್ನು ಆಗಸ್ಟ್‌ 24 ರಂದು ನೀಡಲಾಗಿತ್ತು. ಆ.
24 ರ ಸುತ್ತೋಲೆಯನ್ನು ಹಿಂಪಡೆದು ಶನಿವಾರ (ಸೆಪ್ಟೆಂಬರ್‌ 3) ಆದೇಶ ಹೊರಡಿಸಲಾಗಿದೆ.

Advertisement

Advertisement

![](https://hosakannada.com/wp-content/uploads/2022/09/IMG-20220905-WA0004-698x1024.
jpg)

ಎಸ್‌ಸಿ ಮತ್ತು ಎಸ್‌ಟಿ ಕುಟುಂಬಗಳಿಗೆ ಉಚಿತ ವಿದ್ಯುತ್‌ ಪೂರೈಸುವ ಯೋಜನೆಯನ್ನೇ ಕೈಬಿಡಲಾಗುತ್ತಿದೆ
ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಇಂಧನ
ಸಚಿವ ವಿ. ಸುನಿಲ್‌ ಕುಮಾರ್‌, ‘ಯೋಜನೆ ಅನುಷ್ಠಾನದ ಆದೇಶ ರದ್ದಾಗಿಲ್ಲ. ಮಾರ್ಗಸೂಚಿಗಳನ್ನು ನೀಡಿದ್ದ
ಸುತ್ತೋಲೆಯನ್ನು ಮಾತ್ರ ಹಿಂಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.

‘ಫಲಾನುಭವಿಗಳ ಆಯ್ಕೆಗೆ ನಿಗದಿಪಡಿಸಿದ್ದ ಕೆಲವು ಮಾನದಂಡಗಳನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ.
ಈ ಕಾರಣಕ್ಕಾಗಿ ಸುತ್ತೋಲೆ ರದ್ದು ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

Advertisement
