# ಕಾಡುಹಂದಿಯೆಂದು ತಿಳಿದು ಹೊಡೆದ ಗುಂಡು ಯುವಕನ ಹೊಟ್ಟೆಗೆ!!| ಬೇಟೆಗಾರರು ಪೊಲೀಸ್ ವಶಕ್ಕೆ

- Link: https://hosakannada.com/news/forest-and-hunting/
- Published: 2021-09-09T09:54:12+00:00
- Author: ಹೊಸಕನ್ನಡ

ಕಾಡುಹಂದಿಯ ಬೇಟೆಗೆ ಬಂದಿದ್ದ ಹವ್ಯಾಸಿ ಬೇಟೆಗಾರರಿಂದ ಹಂದಿ ಎಂದು ತಿಳಿದು ಹೊಡೆದ ಗುಂಡು ಯುವಕನಿಗೆ
ತಗುಲಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

Sponsored

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಹೊರವಲಯದಲ್ಲಿ ಈ ದುರಂತ ಸಂಭವಿಸಿದೆ.
ಮಾದೇಶ್ (25) ಎಂಬ ಯುವಕನಿಗೆ ಗುಂಡೇಟು ತಗುಲಿದೆ.

Advertisement

Advertisement

ಮೈಸೂರು ಜಿಲ್ಲೆಯ 6 ಮಂದಿ ಯುವಕರ ತಂಡ ಬೇಟೆಗೆ ಬಂದಿತ್ತು. ನಾಡಬಂದೂಕು ಬಳಸಿ ಕಾಡುಹಂದಿ ಬೇಟೆಗೆ 
ಈ ತಂಡ ಬಂದಿತ್ತು. ಮಾದೇಶ ಅವರ ಕಬ್ಬಿನ ಗದ್ದೆಯಲ್ಲಿ ಹಂದಿಗಾಗಿ ತಂಡ ಶೋಧ ನಡೆಸುತ್ತಿತ್ತು. ಈ ಸಮಯದಲ್ಲಿ
ಅದೇ ಗದ್ದೆಯ ಬದುವಿನಲ್ಲಿ ಮಾದೇಶ ಹುಲ್ಲು ಕೊಯ್ಯುತ್ತಿದ್ದ. ಕಬ್ಬಿನ ಗರಿಗಳು ಅಲುಗಾಡುತ್ತಿದ್ದನ್ನು
ಗಮನಿಸಿದ ತಂಡ ಹಂದಿ ಇರಬಹುದು ಎಂದುಕೊಂಡು ಫೈರಿಂಗ್ ಮಾಡಿದೆ. ಇದು ಮಾದೇಶನಿಗೆ ತಗುಲಿದೆ.

![](https://hosakannada.com/wp-content/uploads/2021/09/IMG-20210909-WA0019.jpg)

**ಗಾಯಗೊಂಡ ಯುವಕ **

ಮಾದೇಶನ ಹೊಟ್ಟೆ ಭಾಗಕ್ಕೆ ಗುಂಡು ತಗುಲಿ ಗಂಭೀರ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ
ಚಿಕಿತ್ಸೆ ನೀಡಲಾಗುತ್ತಿದೆ. ಆರು ಮಂದಿ ಯುವಕರ ಪೈಕಿ ಮೂವರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ
ಒಪ್ಪಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ‌.

Advertisement
