# Hassan: ಆಹಾರ ಸಚಿವ ಮುನಿಯಪ್ಪ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತ

- Link: https://hosakannada.com/news/food-minister-muniyappa-car-met-with-accident/
- Published: 2024-12-05T14:06:08+00:00
- Author: ಹೊಸಕನ್ನಡ ನ್ಯೂಸ್

Hassan: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್‌.ಮುನಿಯಪ್ಪ ಪ್ರಯಾಣ ಮಾಡುತ್ತಿದ್ದ ಕಾರು
ಅಪಘಾತವಾಗಿದೆ. ಹಿಂಬದಿಯಿಂದ ಬರುತ್ತಿದ್ದ ಇನೋವಾ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ.

Sponsored

ಈ ಅಪಘಾತದಲ್ಲಿ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುನಿಯಪ್ಪ ಅವರು ಹಾಸನದಲ್ಲಿ ಜನಕಲ್ಯಾಣ
ಸಮಾವೇಶಕ್ಕೆ ಪ್ರಯಾಣ ಮಾಡುತ್ತಿದ್ದಾಗ, ರಾಷ್ಟ್ರೀಯ ಹೆದ್ದಾರಿ 75 ಶಾಂತ್ರಿಗ್ರಾಮದ ಟೋಲ್‌ ಬಳಿ ಈ
ಘಟನೆ ನಡೆದಿದೆ.

Advertisement

Advertisement

ಸಚಿವರ ಕಾರು ಈ ಅಪಘಾತದಿಂದ ಜಖಂಗೊಂಡಿದೆ. ನಂತರ ಸಚಿವರು ಬದಲಿ ವಾಹನದ ಮೂಲಕ ಸಮಾವೇಶಕ್ಕೆ ಬಂದಿದ್ದಾರೆ.

Advertisement
