# ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ: ಕೋಡಿಯಲ್ಲಿ ಶವ ಪತ್ತೆ

- Link: https://hosakannada.com/news/fisherman-missing-after-falling-into-the-sea-body-found-in-kodi/
- Published: 2026-10-09T11:26:24+00:00
- Author: ಹೊಸಕನ್ನಡ ನ್ಯೂಸ್

ಕುಂದಾಪುರ: ಮಲ್ಪೆ ಬಂದರಿನಿಂದ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ
ಸಮುದ್ರಕ್ಕೆ ಬಿದ್ದು ಅ.3 ರಂದು ನಾಪತ್ತೆಯಾಗಿದ್ದ ಹೊನ್ನಾವರ ಕರ್ಕೆ ಗ್ರಾಮದ ಪ್ರಮೋದ ವಿದ್ಯಾಧರ 
ಗೌಡ (53) ಅವರ ಮೃತದೇಹ ಕುಂದಾಪುರದ ಕೋಡಿಯ ಸಮುದ್ರದಲ್ಲಿ ಪತ್ತೆಯಾಗಿದೆ. ಪ್ರಮೋದ್‌ ಗೌಡ ಮೃತದೇಹವನ್ನು
ಕೋಡಿ ಸಮುದ್ರದಿಂದ ಮೇಲೆತ್ತಲು ನೆರವಾಗಿದ್ದು, ನಂತರ ಆಂಬುಲೆನ್ಸ್‌ನಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ
ರವಾನಿಸಲಾಯಿತು.

Sponsored

ಪತ್ನಿ ಚಂದ್ರಕಲಾ ನೀಡಿದ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Advertisement

Advertisement
