# ಮೀನು ತುಂಬಿದ ಟ್ರಕ್ ಪಲ್ಟಿ, ನಾಲ್ವರ ಸಾವು : ರಸ್ತೆಗೆ ಚೆಲ್ಲಿದ ಮೀನು ಹೆಕ್ಕಲು ನೂಕುನುಗ್ಗಲು

- Link: https://hosakannada.com/news/fish-truck-accident-and-death/
- Published: 2022-01-14T12:27:00+00:00
- Author: ಹೊಸಕನ್ನಡ ನ್ಯೂಸ್

ತಡೆಪಲ್ಲಿಗುಡೆಂ : ಇಂದು ಮುಂಜಾನೆ ಆಂಧ್ರಪ್ರದೇಶದ ತಡೆಪಲ್ಲಿಗುಡೆಂ ಎಂಬಲ್ಲಿ ಮೀನು ತುಂಬಿದ ಟ್ರಕ್
ಪಲ್ಟಿ ಹೊಡೆದು ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.

Sponsored

ಟ್ರಕ್ ಚಾಲಕ ನಿದ್ದೆಗೆ ಜಾರಿದ್ದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.

Advertisement

Advertisement

ಒಂದು ಕಡೆ ಹೆಣ ಬಿದ್ದಿದ್ದರೆ, ಇನ್ನೊಂದೆಡೆ ಮೀನುಗಳೆಲ್ಲಾ ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಮೀನನ್ನು ಹೆಕ್ಕಿಕೊಳ್ಳಲು ಜನರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಈ ಘಟನೆಯಲ್ಲಿ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ
ದಾಖಲಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಚಾಲಕ ನಿದ್ದೆ ಮಾಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement
