# Fire Accident: ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ:  ಐವರು ಸಾವು!

- Link: https://hosakannada.com/news/fire-in-a-moving-bus-five-dead/
- Published: 2025-05-15T10:25:29+00:00
- Author: ಕಾವ್ಯ ವಾಣಿ

Fire Accident: ಚಲಿಸುತ್ತಿದ್ದ ಬಸ್​ನಲ್ಲಿ ಏಕಾಏಕಿ ಬೆಂಕಿ( Fire Accident) ಕಾಣಿಸಿಕೊಂಡಿದ್ದು,
ಬಸ್ ಸುಟ್ಟು ಭಸ್ಮವಾಗಿದೆ. ಇಬ್ಬರು ಮಕ್ಕಳು ಸೇರಿ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ಲಕ್ನೋದಲ್ಲಿ
ನಡೆದಿದೆ.

Sponsored

ಬಿಹಾರದಿಂದ ದೆಹಲಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಮೋಹನ್ ಲಾಲ್ ಗಂಜ್
ಬಳಿಯ ಕಿಸಾನ್ ಪಥ್ ನಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಈ ಸಮಯದಲ್ಲಿ ಪ್ರಯಾಣಿಕರು ನಿದ್ರೆ ಮಂಪರಿನಲ್ಲಿದ್ದರು. ಬಸ್‌ನಲ್ಲಿ ಹೊಗೆ ತುಂಬಲು ಪ್ರಾರಂಭಿಸಿದ 
ನಂತರವೇ ಅವರು ಎಚ್ಚರಗೊಂಡರು. ಆಘಾತಕಾರಿ ಸಂಗತಿಯೆಂದರೆ, ಚಾಲಕ ಕಿಟಕಿ ಒಡೆದು ಸ್ಥಳದಿಂದ ಪರಾರಿಯಾಗಿದ್ದಾನೆ
ಎಂದು ವರದಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ 30 ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಿಸುವಲ್ಲಿ
ಯಶಸ್ವಿಯಾದರು, ಆದರೆ ಆ ಹೊತ್ತಿಗೆ ಇಡೀ ಬಸ್ ಸುಟ್ಟು ಭಸ್ಮವಾಗಿತ್ತು.

Advertisement

Advertisement

Advertisement
