# ಆಡಳಿತ ಅವಧಿ ಪೂರ್ಣಗೊಂಡ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳಿಗೆ ಬೀಳ್ಕೊಡುಗೆ ಮತ್ತು ಗೌರವಾರ್ಪಣೆ

- Link: https://hosakannada.com/news/farewell-and-tributes-to-the-president-vice-president-and-all-members-of-bandaru-gram-panchayat-who-have-completed-their-term-of-office/
- Published: 2026-02-17T18:56:10+00:00
- Author: ಹೊಸಕನ್ನಡ ನ್ಯೂಸ್

ಬಂದಾರು 🙁 ಫೆ.13) 2021-26 ಸಾಲಿನವರೆಗೆ ಐದು ವರ್ಷಗಳ ಕಾಲ ಬಂದಾರು ಗ್ರಾಮ ಪoಚಾಯತ್ ಆಡಳಿತ ಮಂಡಳಿಯ
ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಿದ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು, ಸರ್ವ ಸದಸ್ಯರುಗಳನ್ನು 
ಗೌರವ ಪೂರ್ಣ ಅಭಿನಂದನೆ ಸಲ್ಲಿಸಿ, ಬೀಳ್ಕೊಡಲಾಯಿತು. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಗೆ ಸಹಕಾರ 
ನೀಡಿದ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಂಘ ಅಧ್ಯಕ್ಷ -ಉಪಾಧ್ಯಕ್ಷರು ,ಪಂಚಾಯತ್ ಅಭಿವೃದ್ಧಿ 
ಅಧಿಕಾರಿ, ಸಿಬ್ಬಂದಿ ವರ್ಗ, ಕಂದಾಯ ಇಲಾಖೆ, ಗ್ರಂಥಾಲಯ, ಸಂಜೀವಿನಿ ಒಕ್ಕೂಟ, ಆಶಾ ಕಾರ್ಯಕರ್ತೆಯರು,
ವಾಹನ ಚಾಲಕ ಸಿಬ್ಬಂದಿ, ದಾದಿಯರು, ನಜಲ್ ಮಿತ್ರ, ಅಂಗನವಾಡಿ ಕಾರ್ಯಕರ್ತೆಯರು, ಇವರುಗಳನ್ನು ಆಡಳಿತ
ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

Sponsored


Advertisement

Advertisement

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ, ಖಂಡಿಗ, ಉಪಾಧ್ಯಕ್ಷರಾದ ಶ್ರೀಮತಿ
ಪುಷ್ಪಾವತಿ ಬರಮೇಲು, ಮಾಜಿ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ,ಪುಯಿಲ, ಉಪಾಧ್ಯಕ್ಷರಾದ ಗಂಗಾಧರ
ಪೂಜಾರಿ ದoಬೆತ್ತಿಮಾರು, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್
ಪಣೆಕ್ಕರ, ಉಪಾಧ್ಯಕ್ಷರಾದ ಅಶೋಕ್ ಗೌಡ ಪಾಂಜಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಸದಸ್ಯರುಗಳಾದ
ಬಾಲಕೃಷ್ಣ ಗೌಡ ಮುಗೇರಡ್ಕ,ಚೇತನ್ ಗೌಡ ಕೆಲೆಂಜಿಮಾರು, ಶಿವಣ್ಣ ಗೌಡ ಹೇವ, ಶಿವಪ್ರಸಾದ್ ಗೌಡ ಸುದೆಪ್ಪಿಲ,
ಶ್ರೀಮತಿ ಸುಚಿತ್ರ ಮುರ್ತಾಜೆ, ಶ್ರೀಮತಿ ಅನಿತಾ ಕುರುಡಂಗೆ, ಶ್ರೀಮತಿ ಪವಿತ್ರ ಮುರ, ಶ್ರೀಮತಿ ವಿಮಲ
ತಾರಿದಡಿ, ಶ್ರೀಮತಿ ಶಾಂತ, ಗ್ರಾಮ ಕರಣಿಕರಾದ ರಫೀಕ್ ಮುಲ್ಲಾ,ನರೇಗಾ ಯೋಜನೆಯ ಶರಣ್, ಪ್ರಾರ್ಥನಾ,
ಬಂದಾರು ಅರೋಗ್ಯ ಇಲಾಖೆಯ ಸಿ ಎಚ್ ಓ ಜಗದೀಶ್, ಪಂಚಾಯತ್, ಕಂದಾಯ ಇಲಾಖೆ, ಗ್ರಂಥಾಲಯ, ಅರೋಗ್ಯ ಇಲಾಖೆ
ಆಶಾ ಕಾರ್ಯಕರ್ತೆಯರು,ದಾದಿಯರು, ಸಂಜೀವಿನಿ ಒಕ್ಕೂಟ ಎಂ.ಬಿ.ಕೆ,ನಲ್ ಜಲ್ ಮಿತ್ರ, ನರೇಗಾ ಯೋಜನೆಯ 
ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement
