# Simran Singh: ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ RJ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ – ಆಗಿದ್ದೇನು?

- Link: https://hosakannada.com/news/famous-social-media-star-rj-simran-singh-found-dead-what-happened/
- Published: 2024-12-27T07:13:01+00:00
- Author: ಹೊಸಕನ್ನಡ ನ್ಯೂಸ್

Simran Singh: ಖ್ಯಾತ ಸೋಷಿಯಲ್‌ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಹಾಗೂ RJ ಆಗಿದ್ದ ಸಿಮ್ರಾನ್ ಸಿಂಗ್(
Simran Singh) ಗುರುಗ್ರಾಮ್‌ನಲ್ಲಿ ಮೃತರಾಗಿದ್ದಾರೆ. ಅವರ ಈ ಸಾವನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.

Sponsored

ಹೌದು, ಲಕ್ಷಾಂತರ ಅಭಿಮಾನಿಗಳಿಂದ RJ ಸಿಮ್ರಾನ್ ಎಂದು ಕರೆಯಲ್ಪಡುವ ಸಿಮ್ರಾನ್ ಸಿಂಗ್ ಅವರ ತಮ್ಮ 
ಇನ್​ಸ್ಟಾಗ್ರಾಮ್​ನಲ್ಲಿ ಡಿಸೆಂಬರ್ 13ರಂದು ಕೊನೆಯದಾಗಿ ರೀಲ್ ಅನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.
ಆದರೆ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಗುರುಗ್ರಾಮ್‌ ಸೆಕ್ಟರ್ 47 ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ
ಪತ್ತೆಯಾಗಿದ್ದಾರೆ.

Advertisement

Advertisement

ಸಿಮ್ರಾನ್‌ ಗುರುಗ್ರಾಮ್‌ ಸೆಕ್ಟರ್‌-47ರಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ
ಆಕೆಯ ಸ್ನೇಹಿತನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮರಣೋತ್ತರ
ಪರೀಕ್ಷೆ ಬಳಿಕ ಆಕೆಯ ಮೃತದೇಹವನ್ನ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ತನಿಖೆ ಆರಂಬಿಸಿದ್ದಾರೆ.

Advertisement
