# ಎಕ್ಸಲೆಂಟ್ ಮೂಡುಬಿದಿರೆ ಶಾಲೆಯ ಸುವರ್ಣ ಸಾಧನೆ: 2025-26ನೇ ಸಾಲಿನ ಎಸ್‌ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಅಗ್ರ 10 ಬ್ಯಾಂಕ್‌ಗಳಲ್ಲಿ 9 ವಿದ್ಯಾರ್ಥಿಗಳು

- Link: https://hosakannada.com/news/excellent-moodabidre-school/
- Published: 2026-04-23T20:06:57+00:00
- Author: ಹೊಸಕನ್ನಡ ನ್ಯೂಸ್

ಎಕ್ಸಲೆಂಟ್ ಮೂಡುಬಿದಿರೆ ಶಾಲೆ 2025-26ರ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅಗ್ರ 10 ರ್ಯಾಂಕ್
ಗಳಲ್ಲಿ  9 ವಿದ್ಯಾರ್ಥಿಗಳು ರ್ಯಾಂಕ್ ಗಳನ್ನು ಪಡೆದು ಸತತ 6ನೇ ಬಾರಿ ಶೇಕಡಾ 100 ಫಲಿತಾಂಶವನ್ನು
ಪಡೆದು ತನ್ನ ಶೈಕ್ಷಣಿಕ ಕ್ಷೇತ್ರದಲ್ಲಿ  ಮತ್ತೊಮ್ಮೆ ಹೊಸ ಸಾಧನೆ ಮಾಡಿದೆ.

Sponsored

ಸಚಿನ್ ಡಿ ನಾಯ್ 622 (4ನೇ ರ್ಯಾಂಕ್), ನಕ್ಷತ್ರ ವಿ – 620 (6 ನೇ ಬ್ಯಾಂಕ್), ಗಗನ್ ಪಾಟೀಲ್ – 
618( 8 ನೇ ಬ್ಯಾಂಕ್), ದೇವಾನಂದ ಹನುಮಂತ ಗೌಡ ಬಿರಾದಾರ್ – 618(8 ನೇ ರ್ಯಾಂಕ್), ಅನ್‌ಮೋಲ್ ಆರ್
ಪಾಟೀಲ್ – 618( 8 ನೇ ಬ್ಯಾಂಕ್), ಪ್ರತೀಕ್ ಸಂಗ್ರೀಷಿ – 617 (9 ನೇ ರ್ಯಾಂಕ್), ಸಿ ಹರಿಪ್ರೀತ್
ವಿ ಪೈ – 616( 10 ನೇ ರ್ಯಾಂಕ್), ಆರ್ಯನ್ ಕುಮಾರ್ ಹಳ್ಳಿ – 616(10 ನೇ ರ್ಯಾಂಕ್), ಆಕಾಂಕ್ಸ್ 
ಎಮ್ ಜೈನ್ – 616 ( 10 ನೇ ರ್ಯಾಂಕ್) ಗಳನ್ನು ಗಳಿಸುವುದರ ಮೂಲಕ ಸಂಸ್ಥೆಯ ಸಂಸ್ಕಾರಭರಿತ ಗುಣಮಟ್ಟದ
ಶಿಕ್ಷಣಕ್ಕೆ ಸಾಕ್ಷಿಯಾಗಿದೆ.ಈ ಸಾಧನೆಯಲ್ಲಿ 23 ವಿದ್ಯಾರ್ಥಿಗಳು 610ಕ್ಕಿಂತ ಹೆಚ್ಚು, 45 ವಿದ್ಯಾರ್ಥಿಗಳು
600ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಮಿಂಚಿದ್ದಾರೆ.

Advertisement

Advertisement

53 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು, 112 ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಹಾಗೂ 151
ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯನ್ನು ಪಡೆದು ಸಾಧನೆಯನ್ನು
ಮೆರೆದಿದ್ದಾರೆ. ವಿಷಯವಾರು ಸಾಧನೆಯಲ್ಲಿಯೂ ವಿದ್ಯಾರ್ಥಿಗಳು ಮೈಲಿಗಲ್ಲು ಸ್ಥಾಪಿಸಿದ್ದು, ಸಂಸ್ಕೃತದಲ್ಲಿ
45 ವಿದ್ಯಾರ್ಥಿಗಳು ಕನ್ನಡದಲ್ಲಿ 44, ಹಿಂದಿಯಲ್ಲಿ 31, ಗಣಿತದಲ್ಲಿ 11, ಸಮಾಜ ವಿಜ್ಞಾನದಲ್ಲಿ 8
ಮತ್ತು ವಿಜ್ಞಾನ ವಿಷಯದಲ್ಲಿ 2 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳು ಮತ್ತು ಪ್ರಥಮ ಭಾಷೆ ಇಂಗ್ಲೀಷ್‌ನಲ್ಲಿ
13 ವಿದ್ಯಾರ್ಥಿಗಳು 125 ಅಂಕಗಳಿಗೆ 124 ಅಂಕಗಳನ್ನು ಪಡೆದು ಮಿಂಚಿದ್ದಾರೆ.

ಒಟ್ಟಾರೆಯಾಗಿ 141 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆಯುವುದರ ಮೂಲಕ ಸಂಸ್ಥೆಗೆ ಕೀರ್ತಿ
ತಂದಿದ್ದಾರೆ. ವಿದ್ಯಾರ್ಥಿಗಳ ಈ ಅಭೂತಪೂವ ಯಶಸ್ಸಿಗೆ ಸಂತಸ ವ್ಯಕ್ಯಪಡಿಸಿರುವ ಎಕ್ಸಲೆಂಟ್ ಗ್ರೂಪ್
ಆ¥s: l ಇನ್ಸಿಟ್ಯೂಷನ್ಸ್ ಅಧ್ಯಕ್ಷರಾದ ಯುವರಾಜ್ ಜೈನ್ ನಮ್ಮ ವಿದ್ಯಾರ್ಥಿಗಳ ಶಿಸ್ತುಬದ್ದ ಅಭ್ಯಾಸ,
ಪರಿಶ್ರಮ, ಬೋಧಕ ವರ್ಗದವರ ಮಾರ್ಗದರ್ಶನದಿಂದ ಈ ಯಶಸ್ಸು ಲಭಿಸಿದೆ. ಈ ಯಶಸ್ಸಿಗೆ ಶ್ರಮಿಸಿದ ಎಲ್ಲಾ
ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಹಾಗೂ ಬೋಧಕ ವರ್ಗಕ್ಕೆ ಹೃತೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಶೈಕ್ಷಣಿಕವಾಗಿ ಹಿಂದುಳಿದ ರಾಜ್ಯದ ಹಲವು ವಿದ್ಯಾರ್ಥಿಗಳು ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಸೇರಿದ ನಂತರ
ಅತ್ಯುತ್ತಮ ಫಲಿತಾಂಶ ಪಡೆದಿರುವುದು ಸಂಸ್ಥೆಯ ಉತ್ಕೃಷ್ಟ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ 
ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಸಂತಸ ವ್ಯಕ್ತಪಡಿಸಿದರು.

ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ
ಈ ಐತಿಹಾಸಿಕ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.

Advertisement
