# Accident: ಬೆಂಗಳೂರು ಮೈಸೂರು ಹೈವೇಯಲ್ಲಿ ಭೀಕರ ಅಪಘಾತ: 3 ಜನ ಸ್ಥಳದಲ್ಲೇ ಸಾವು

- Link: https://hosakannada.com/news/errible-accident-on-bangalore-mysore-highway-3-people-died-on-the-spot/
- Published: 2025-07-13T08:34:44+00:00
- Author: V R

Accident: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ ಉಂಟಾಗಿದ್ದು, ತಡೆಗೋಡೆಗೆ
ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ರಾಮನಗರ ತಾಲೂಕಿನ ಜಯಪುರಗೇಟ್‌
ಬಳಿ ಈ ಘಟನೆ ಇಂದು ಬೆಳಗ್ಗೆ ನಡೆದಿರುವ ಕುರಿತು ವರದಿಯಾಗಿದೆ.

Sponsored

ಚಿಕ್ಕನಾಯಕಹಳ್ಳಿಯ ತಮ್ಮಣ್ಣಗೌಡ (56), ಪುತ್ರ ಮುತ್ತುರಾಜ್‌ (28), ಹಾಸನ ಮೂಲದ ಚಾಲಕ ಸಚಿನ್‌ (
27) ಮೃತ ಪಟ್ಟವರು. ಸಂಜು ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ
ದಾಖಲು ಮಾಡಲಾಗಿದೆ. ಮಡವಿನಕೊಡಿ ಗ್ರಾಮದಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿ ವಾಪಾಸು ಬೆಂಗಳೂರಿಗೆ ಬರುವ
ಸಂದರ್ಭದಲ್ಲಿ ಈ ಅಪಘಾತ ನಡೆದಿದೆ.

Advertisement

Advertisement

ಘಟನಾ ಸ್ಥಳಕ್ಕೆ ರಾಮನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Advertisement
