# ರಾತ್ರಿ ಚಾರ್ಜ್ ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ನಿಂದ ಏಕಾಏಕಿ ಬೆಂಕಿ, ವಿಷಕಾರಿ ಅನಿಲ ಮನೆ ತುಂಬಿದ ಪರಿಣಾಮ ತಂದೆ ಮಗಳ ದಾರುಣ ಸಾವು !

- Link: https://hosakannada.com/news/electric-scooter-fire/
- Published: 2022-03-26T17:12:36+00:00
- Author: ಹೊಸಕನ್ನಡ ನ್ಯೂಸ್

ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ,
ವಿಷಕಾರಿ ಹೊಗೆ ಹೊರಗೆ ಬಂದು ತಂದೆ ಮತ್ತು ಮಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ
ವೆಲ್ಲೂರಿನಲ್ಲಿ ನಡೆದಿದೆ.

Sponsored

ವೆಲ್ಲೂರಿನ ಚಿನ್ನಅಲ್ಲಲಾಪುರಂ ನಿವಾಸಿ ದುರೈವರ್ಮ (49) ಮತ್ತು ಅವರ ಪುತ್ರಿ ಮೋಹನ ಪ್ರೀತಿ (13)
ಸಾವನ್ನಪ್ಪಿದ್ದ ದುರ್ದೈವಿಗಳು.

Advertisement

Advertisement

ಇತ್ತೀಚೆಗಷ್ಟೇ ದುರೈವರ್ಮ ಅವರು ಇ ಸ್ಕೂಟರ್ ಅನ್ನು ಖರೀದಿಸಿದ್ದು, ರಾತ್ರಿ ಸ್ಕೂಟರ್‌ಗೆ ಚಾರ್ಜಿಂಗ್
ಹಾಕಿ ಮಲಗಿದ್ದರು. ಮಧ್ಯರಾತ್ರಿ ಸ್ಕೂಟರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ವಿಷಕಾರಿ ಹೊಗೆ 
ಅವರ ಮನೆಗೆ ತುಂಬಿದೆ. ಮನೆಯೊಳಗಿದ್ದ ತಂದೆ ಮತ್ತು ಮಗಳು ಇಬ್ಬರೂ ಉಸಿರುಗಟ್ಟಿದ್ದು ಸಾವನ್ನಪ್ಪಿದ್ದಾರೆ.
ಅಷ್ಟು ಮಾತ್ರವಲ್ಲದೇ ಬೆಂಕಿಯಿಂದ ಮನೆಗೂ ಹಾನಿಯಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
