# ಚುನಾವಣೋತ್ತರ ಸಮೀಕ್ಷೆ- ಪಶ್ಚಿಮ ಬಂಗಾಳದಲ್ಲಿ ಈ ಬಾರಿ ‘ಕಮಲ ಅರಳುವುದು’ ಫಿಕ್ಸ್!!

- Link: https://hosakannada.com/news/election-post-election-survey-bjp-is-certain-to-come-to-power-in-west-bengal/
- Published: 2026-05-01T08:51:49+00:00
- Author: ಹೊಸಕನ್ನಡ ನ್ಯೂಸ್

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದ್ದು
ಇದೀಗ, ಇಡೀ ದೇಶದ ಚಿತ್ತ ಈ 5 ರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ನೆಟ್ಟಿದೆ. ಜನರು ಕೂಡ ಮತದಾರ 
ಯಾರಿಗೆ ಜೈ ಎಂದಿದ್ದಾನೆ ಎಂದು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಈ ಐದು ರಾಜ್ಯಗಳ ಪೈಕಿ
ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಫಿಕ್ಸ್ ಎಂದು ಎಕ್ಸಿಟ್ ಪೋಲ್ ಗಳು 
ತಿಳಿಸಿವೆ.

Sponsored

ಯಸ್, ಈ ಬಾರಿ ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ (BJP) ಅಧಿಕಾರಕ್ಕೆ ಏರಲಿದೆ ಎಂದು 
ರಿಪಬ್ಲಿಕ್‌ ಟಿವಿ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ. ಬಿಜೆಪಿ 150-175, ಟಿಎಂಸಿ(TMC) 118-138,
ಕಾಂಗ್ರೆಸ್‌ 02-06 ಸ್ಥಾನ ಗಳಿಸಬಹುದು. ಮತಗಳಿಕೆಯಲ್ಲಿ ಬಿಜೆಪಿ 42%, ಟಿಎಂಸಿ 44%, ಕಾಂಗ್ರೆಸ್‌
14% ಮತ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

Advertisement

Advertisement

ಇನ್ನೂ ಟುಡೇಸ್ ಚಾಣಕ್ಯ ಸಮೀಕ್ಷೆಯ ಪ್ರಕಾರ, ಬಂಗಾಳದಲ್ಲಿ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ಕಾಣುತ್ತಿದೆ,
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸ್ಥಾನವು 100ಕ್ಕೆ ಕುಸಿಯುವ ಸಾಧ್ಯತೆಯಿದ್ದರೆ, ವಿಪಕ್ಷ ಬಿಜೆಪಿ
192 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಬಹುದು ಎಂದು ಅಂದಾಜಿಸಲಾಗಿದೆ.
ಇದು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಲ್ಲಿ ಬಿರುಕು ಮೂಡಿರುವುದನ್ನು ತೋರಿಸುತ್ತದೆ.

2021 ರ ಚುನಾವಣೆಯಲ್ಲಿ ಒಟ್ಟು 294 ಸ್ಥಾನಗಳ ಪೈಕಿ ಟಿಎಂಸಿ 215 ಗೆದ್ದು ಪ್ರಚಂಡ ಬಹುಮತ ಸಾಧಿಸಿತ್ತು.
ಬಿಜೆಪಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧ ಪಕ್ಷದ ಸ್ಥಾನವನ್ನು ಪಡೆದುಕೊಂಡಿತ್ತು. ರಾಷ್ಟ್ರೀಯ
ಸೆಕ್ಯುಲರ್ ಮಜ್ಲಿಸ್ ಪಾರ್ಟಿ (RSMP) 1 ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನ ಗೆದ್ದಿದ್ದರು.

Advertisement
