# Karnataka: ರಾಜ್ಯದ ಎಲ್ಲಾ ಉಪನ್ಯಾಸಕರಿಗೆ ಶಾಕ್ ಕೊಟ್ಟ ಸರ್ಕಾರ- ಇದೊಂದು ತಪ್ಪು ಮಾಡಿದ್ರೆ ನಿಮ್ಮ ಕೆಲಸಕ್ಕೇ ಬರುತ್ತೆ ಕುತ್ತು

- Link: https://hosakannada.com/news/education-news-karnataka-government-give-shock-to-government-lecture-who-work-in-coaching-centre-and-tutorials/
- Published: 2023-10-01T15:11:51+00:00
- Author: ಹೊಸಕನ್ನಡ ನ್ಯೂಸ್

 

Sponsored

Karnataka: ರಾಜ್ಯ ಸರ್ಕಾರ(Karnataka Government)ಬೆಂಗಳೂರು ಸರ್ಕಾರಿ ಅನುದಾನಿತ ಶಾಲೆ ಕಾಲೇಜುಗಳ
ಉಪನ್ಯಾಸಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಉಪನ್ಯಾಸಕರೇ, ಈ ವಿಚಾರ ಮೊದಲು ತಿಳಿದುಕೊಳ್ಳಿ. ಒಂದು
ವೇಳೆ ಈ ತಪ್ಪು ಮಾಡಿದಲ್ಲಿ ನೀವು ಕೆಲಸ (Job) ಕಳೆದುಕೊಳ್ಳೋದು ಗ್ಯಾರಂಟೀ !!

Advertisement

Advertisement

ಟುಟೋರಿಯಲ್, ಕೋಚಿಂಗ್ ಸೆಂಟರ್ಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡಿದ್ದರೆ ಆ ರೀತಿಯ ಉಪನ್ಯಾಸಕರಿಗೆ
ಸರ್ಕಾರಿ ಕತ್ತರಿ ಬೀಳೋದು ಫಿಕ್ಸ್ . ಹೌದು, ಈ ಆದೇಶವನ್ನು ಸರ್ಕಾರವೇ ಹೊರಡಿಸಿದ್ದು,ಸರ್ಕಾರಿ ಅನುದಾನಿತ
ಶಾಲೆ ಕಾಲೇಜುಗಳ ಉಪನ್ಯಾಸಕರು ಖಾಸಗಿ ಟುಟೋರಿಯಲ್ ನಡೆಸುವಂತಿಲ್ಲ. ಅಷ್ಟೇ ಅಲ್ಲದೆ, ಕೋಚಿಂಗ್ ಸೆಂಟರ್
ಅಲ್ಲಿ ಕೆಲಸ ಮಾಡಲು ಅವಕಾಶವಿಲ್ಲ. ಈ ರೀತಿ ಪಾಠ-ಪ್ರವಚನ ಮಾಡುವುದು ಅಪರಾಧವಾಗಿದ್ದು, ಅವರು ಕೆಲಸವನ್ನೇ
ಕಳೆದುಕೊಳ್ಳಬೇಕಾಗುತ್ತದೆ. ಇದಲ್ಲದೆ, ಈ ರೀತಿಯ ಟುಟೋರಿಯಲ್ಗಳನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ
ಸೂಚನೆ ನೀಡಿದೆ.

ಟುಟೋರಿಯಲ್ ನಡೆಸಲು ಅರ್ಹತೆಗಳು ಹೀಗಿವೆ:
 # ನಿಗದಿತ ವಿಸ್ತೀರ್ಣವುಳ್ಳ ತರಗತಿ ಕೋಣೆಗಳು, ಶೌಚಾಲಯ,
ನೀರಿನ ವ್ಯವಸ್ಥೆ ಕಡ್ಡಾಯವಾಗಿರಬೇಕು. # ಪ್ರತಿ ವಿದ್ಯಾರ್ಥಿಗೆ ಕನಿಷ್ಠ 5ರಿಂದ 7 ಚದರ ಅಡಿ ವಿಸ್ತೀರ್ಣದ
ಜಾಗವನ್ನು ಒಳಗೊಂಡಿರಬೇಕು. # ಗರಿಷ್ಠ 30 ವಿದ್ಯಾರ್ಥಿಗಳಿಗೆ ಅನುಗುಣವಾಗಿ ಪೀಠೋಪಕರಣಗಳ ವ್ಯವಸ್ಥೆ
ಹೊಂದಿರಬೇಕು. # ವಿದ್ಯಾರ್ಥಿಗಳಿಂದ ಪಡೆದ ಟಟೋರಿಯಲ್ ಶುಲ್ಕದ ವಿವರಗಳನ್ನು ರಶೀದಿಗಳ ಸಮೇತ ಸಲ್ಲಿಸಬೇಕು.#
ಪರಿಣಿತ ಉಪನ್ಯಾಸಕರು, ಶಿಕ್ಷಕರನ್ನು ನೇಮಕಾತಿ ಕಡ್ಡಾಯವಾಗಿದ್ದು, ವಿದ್ಯಾರ್ಹತೆ, ಅನುಭವ, ಸಂಭಾವನೆ
ವಿವರಗಳನ್ನು ಇಲಾಖೆಗೆ ಸಲ್ಲಿಸಬೇಕು. ಮೇಲೆ ತಿಳಿಸಿದ ನಿಯಮಗಳನ್ನು ಉಲ್ಲಂಸಿದರೆ, ಸಂಸ್ಥೆಯ ನೋಂದಣಿಯನ್ನು
ರದ್ದುಗೊಳಿಸಿ ಟುಟೋರಿಯಲ್ ಕಾರ್ಯವನ್ನು ಸ್ಥಗಿತಗೊಳಿಸಲಾಗುತ್ತದೆ.

**ಆದೇಶದಲ್ಲಿ ಏನಿದೆ?**
 * ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 35 ಮತ್ತು ಕರ್ನಾಟಕ ಟುಟೋರಿಯಲ್
ಇನ್ಸ್ಟಿಟ್ಯೂಷನ್ಸ್-2001ರ ಅನುಸಾರ, ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. * 
ನಿಯಮಗಳ ಪ್ರಕಾರ ಪ್ರತಿ ವರ್ಷ ಇಲಾಖೆಗೆ ವಾರ್ಷಿಕ ವರದಿಯನ್ನು ಸಲ್ಲಿಕೆ ಮಾಡಿ ನೋಂದಣಿ ನವೀಕರಣ ಮಾಡಿಕೊಳ್ಳಬೇಕು.*
ಡಿಪ್ಲೊಮೊ, ಎಂಜಿನಿಯರಿಂಗ್, ಇತರೆ ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಟುಟೋರಿಯಲ್ ಸಂಸ್ಥೆ ಕಾರ್ಯ
ನಿರ್ವಹಿಸಲು ಅನುಮತಿ ಕಡ್ಡಾಯವಾಗಿದೆ. * ಅನಧಿಕೃತವಾಗಿ ಮನೆಪಾಠ, ಸಿಇಟಿ ಕೋಚಿಂಗ್ ಸೇರಿ ಇತರೆ ಟುಟೋರಿಯಲ್ಗಳನ್ನು,
ಅನಧಿಕೃತ ಸಂಸ್ಥೆಗಳನ್ನು ಹೊಂದುವುದು ಕೂಡ ಅಪರಾಧವಾಗುತ್ತದೆ.

ಇದನ್ನೂ ಓದಿ: [ಬೆಂಗಳೂರು ಕಂಬಳದ ಕೋಣಗಳಿಗೆ ಮಂಗಳೂರಿಂದಲೇ ಕುಡಿವ ನೀರು ಪೂರೈಕೆ ?! ಅರೆ.. ಯಾಕೆ ಹೀಗೆ?!](https://hosakannada.com/2023/10/01/karnataka-news-drinking-water-for-bengaluru-kambala-buffalo-comes-from-mangalore-latest-news/)

Advertisement
