# ಗಣರಾಜ್ಯೋತ್ಸವಕ್ಕೆ ಇ-ಪಾಸ್‌

- Link: https://hosakannada.com/news/e-pass-for-republic-day/
- Published: 2026-01-23T09:23:48+00:00
- Author: ಹೊಸಕನ್ನಡ ನ್ಯೂಸ್

ಬೆಂಗಳೂರು: ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಜ.26ರಂದು ನಡೆಯಲಿರುವ ರಾಜ್ಯಮಟ್ಟದ
77ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು ಸಾರ್ವಜನಿಕರಿಗೆ ‘ಇ-ಪಾಸ್’ ವ್ಯವಸ್ಥೆ ಕಲ್ಪಿಸಲಾಗಿದೆ
ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.

Sponsored

ಆಸಕ್ತರು ಸೇವಾಸಿಂಧು ವೆಬ್‌ಸೈಟ್‌ (www.sevasindhu.karna-taka.gov.in) ನಲ್ಲಿ ಜ.24ರ ಸಂಜೆ
5 ಗಂಟೆ ಒಳಗೆ ಅಗತ್ಯವಿರುವ ಎಲ್ಲ ವೈಯಕ್ತಿಕ ವಿವರಗಳನ್ನು ನಮೂದಿಸಿ ‘ಇ-ಪಾಸ್’ ಪಡೆಯಬಹುದಾಗಿದೆ.

Advertisement

Advertisement

ಇ-ಪಾಸ್ ಹೊಂದಿರುವವರು ಪರೇಡ್ ಮೈದಾನದ ಪ್ರವೇಶ ದ್ವಾರ ಸಂಖ್ಯೆ ‘5’ರಲ್ಲಿಪರಿಶೀಲನೆಗಾಗಿ ‘ಇ-ಪಾಸ್’ನ
ಮುದ್ರಿತ ಅಥವಾ ಡಿಜಿಟಲ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಇ-ಪಾಸ್ ನೋಂದಣಿ ಪ್ರಕ್ರಿಯೆ ಕುರಿತು
ಸಹಾಯಕ್ಕಾಗಿ ಸೇವಾ ಸಿಂಧು ವೈಬ್‌ಸೈಟ್‌ನ ಸಹಾಯ ವಿಭಾಗ ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
