# ದಸರಾ ರಜೆ ವಿಸ್ತರಣೆ: ಮಂಗಳೂರಿನ ಶಾಲೆಗಳಿಗೆ ಅ.22 ರಂದು ರಜೆ ಘೋಷಣೆ

- Link: https://hosakannada.com/news/dussehra-holiday-extension-schools-in-mangalore-announce-holiday-on-oct-22/
- Published: 2026-10-21T18:50:56+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ(
1 ರಿಂದ 10ನೇ ತರಗತಿ ವರೆಗೆ ) ದಸರಾ ರಜೆ ವಿಸ್ತರಿಸಲಾಗಿದೆ, ಅಕ್ಟೋಬರ್ 22 ರಂದು ರಜೆ ಘೋಷಿಸಿ ಶಾಲಾ
ಶಿಕ್ಷಣ ಇಲಾಖೆ ಉಪನಿರ್ದೇಶಕರು ಅದೇಶಿಸಿದ್ದಾರೆ.

Sponsored

ನವರಾತ್ರಿ ಉತ್ಸವದ ಕೊನೆಯ ದಿನ (ಅ. 21) ತಡರಾತ್ರಿಯವರೆಗೆ ಕಾರ್ಯಕ್ರಮವಿರುವ ಕಾರಣ ವಿದ್ಯಾರ್ಥಿಗಳಿಗೆ
ಮರುದಿನ ಅ.22 ಶಾಲೆಗಳಿಗೆ ತೆರಳಲು ಸಮಸ್ಯೆಯಾಗಲಿರುವ ಕಾರಣ ಈ ಬಗ್ಗೆ ಪರಿಶೀಲಿಸಬೇಕು ಎಂದು ಸಾರ್ವಜನಿಕರು
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್‌ರ ಗಮನ ಸೆಳೆದಿದ್ದರು.

Advertisement

Advertisement

ಇದೀಗ ದ.ಕ ಜಿಲ್ಲೆಯ 1 ರಿಂದ 10ನೇ ತರಗತಿಯವರೆಗೆ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಗುರುವಾರ(
ಅ.22) ರಂದು ರಜೆ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ. ಎ.23 ರಿಂದ
ಎಂದಿನಂತೆ ಶಾಲೆಗಳು ಮುಂದುವರಿಯಲಿದೆ.

Advertisement
