# ಕುಡಿದ ಮತ್ತಿನಲ್ಲಿ ಸ್ನೇಹಿತರ ಸವಾಲು ಸ್ವೀಕರಿಸಿದ ಕುಡುಕ | ಸವಾಲೇನೋ ಗೆದ್ದ, ಆದರೆ ಪೊಲೀಸ್ ಪಾಲಾದ!!!

- Link: https://hosakannada.com/news/drunk-man-sneaks-into-womans-house-to-win-bet-thrashed/
- Published: 2022-10-16T13:07:16+00:00
- Author: Mallika

ಕುಡಿದರೆ ಸುತ್ತಮುತ್ತ ಏನಾಗುತ್ತೇ ಅನ್ನೋದು ಗೊತ್ತಾಗಲ್ಲ. ಯಾರೇ ಆಗಲಿ ಮದ್ಯಪಾನ ಮಾಡಿದರೆ ತಮ್ಮ 
ಮೈಮರೆಯುವುದು ಸಹಜ. ಆದರೆ ಆ ಮೈಮರೆತರೆ ಆಗುವ ಅನಾಹುತ ಮಾತ್ರ ಅಷ್ಟಿಷ್ಟಲ್ಲ. ಈ ಅನಾಹುತ, ಕಿರಿಕ್
ಗಳಿಂದ ಪೊಲೀಸ್ ಮೆಟ್ಟಿಲೇರಿದವರು ಎಷ್ಟು ಮಂದಿಯೋ. ಹಾಗೆನೇ ಇಲ್ಲೊಬ್ಬ ವ್ಯಕ್ತಿ ಮದ್ಯಪಾನ ಮಾಡಿದ 
ಮತ್ತಿನಲ್ಲಿ ಸ್ನೇಹಿತರ ಸವಾಲು ಸ್ವೀಕರಿಸಿ ಮನೆಯೊಳಗೆ ನುಗ್ಗಿ ಮಹಿಳೆಯನ್ನು ‘ಸ್ಪರ್ಶಿಸಿ’ ಧರ್ಮದೇಟು
ತಿಂದಿದ್ದಾನೆ.

Sponsored

ಗುರುವಾರ ರಾತ್ರಿ ಮನೆಯೊಂದಕ್ಕೆ ನುಸುಳಿದ್ದ ಕುಡುಕನನ್ನು ಚೆನ್ನೈನ ಅಂಬತ್ತೂರು ಬಳಿಯ ಕಲಿಕುಪ್ಪಂ
ನಿವಾಸಿಗಳು ಹಿಡಿದಿದ್ದಾರೆ.

Advertisement

Advertisement

ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆಯನ್ನು ಟಚ್ ಮಾಡಿದಾಗ, ಮಹಿಳೆಯು ಜೋರಾಗಿ ಕಿರುಚಿದ್ದಾಳೆ.
ರಾತ್ರೋರಾತ್ರಿ ಮಹಿಳೆಯ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕಾಗಮಿಸಿದರು. ಕೂಡಲೇ ಕುಡುಕ ವ್ಯಕ್ತಿಯನ್ನು
ಹಿಡಿದುಕೊಂಡಿದ್ದಾರೆ. ಕುಡುಕ ವ್ಯಕ್ತಿಯನ್ನು ದರೋಡೆಕೋರ ಎಂದು ತಿಳಿದ ಸ್ಥಳೀಯರು ಹಲ್ಲೆ ನಡೆಸಿ ಪೊಲೀಸರಿಗೆ
ಒಪ್ಪಿಸಿದ್ದಾರೆ.

ಈ ಸಂದರ್ಭದಲ್ಲಿ ನೆರೆಹೊರೆಯವರು ವಿಚಾರಿಸಿದಾಗ ಮನೆಯೊಳಗೆ ನುಸುಳಲು ಮತ್ತು ಮಹಿಳೆಯನ್ನು ಸ್ಪರ್ಶ 
ಮಾಡುವಂತೆ ಕೆಲವು ಸ್ನೇಹಿತರು ಅವನಿಗೆ ಸವಾಲು ಹಾಕಿದ್ದರು. ಹಾಗಾಗಿ ನಾನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಶುಕ್ರವಾರದಂದು ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

Advertisement
