# Ten Rupee Coin: ನಿಮ್ಮಲ್ಲಿ ಹತ್ತು ರೂಪಾಯಿ ನಾಣ್ಯ ಇದೆಯಾ? ಇಲ್ಲಿದೆ ನೋಡಿ ಬಿಗ್ ಅಪ್ಡೇಟ್ ನ್ಯೂಸ್

- Link: https://hosakannada.com/news/do-you-have-a-ten-rupee-coin-here-is-the-big-update-news/
- Published: 2024-10-18T10:37:34+00:00
- Author: ಕಾವ್ಯ ವಾಣಿ

Ten Rupee Coin: ಬಹುತೇಕರ ಬಳಿಯಲ್ಲಿ 10 ರೂಪಾಯಿ ನಾಣ್ಯ (Ten Rupee Coin) ಇದ್ದು, ಈ ನಾಣ್ಯ
ಒಂದು ಸಮಯದಲ್ಲಿ ಚಲಾವಣೆಯಲಿಲ್ಲ, ಇದನ್ನು ಯಾರು ಸಹ ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ಸಮಸ್ಯೆಗೆ
ಸಿಲುಕಿದ್ದರು. ಯಾವುದೇ ವ್ಯಕ್ತಿಗಳು ಈ ನಾಣ್ಯ ವಿನಿಮಯ ಮಾಡಲು ಒಪ್ಪುತ್ತಿರಲಿಲ್ಲ.

Sponsored

ಹೌದು, ಇದೀಗ ಮತ್ತೆ ಇತ್ತೀಚಿನ ದಿನಗಳಲ್ಲಿ ಇದೇ ಸಮಸ್ಯೆ ಮತ್ತೆ ಸದ್ದು ಮಾಡುತ್ತಿದ್ದು, ಅನೇಕರು 
ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ ಮುದ್ರಿಸಿರುವ ಹೊಸ 10 ರೂ. ನಾಣ್ಯಗಳನ್ನು ಹಾಗೂ ಹಳೆಯ ಕಾಯಿನ್​
ಗಳನ್ನು ಬಸ್​ ನಿರ್ವಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಕೊಟ್ಟರೆ, ನಾವು ಸ್ವೀಕರಿಸಲ್ಲ. ಈಗ ಇದರ
ಅಸ್ತಿತ್ವವಿಲ್ಲ, ಚಲಾವಣೆಯೂ ಆಗ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಕೆಲವರು, ತಮ್ಮ ಸುತ್ತಮುತ್ತಲಿನ
ಬ್ಯಾಂಕ್​ಗಳಿಗೆ ಭೇಟಿ ನೀಡಿ, ಇದರ ಚಲಾವಣೆ ಇದೆಯೋ? ಇಲ್ಲವೋ? ಎಂದು ಸಿಬ್ಬಂದಿಗಳ ಬಳಿಯೇ ನೇರವಾಗಿ
ಸ್ಪಷ್ಟನೆ ಕೇಳಿರುವುದು ಉಂಟು.

Advertisement

Advertisement

ಆದ್ರೆ 10 ರೂ. ಕಾಯಿನ್​ ಬಗ್ಗೆ RBI ಹೇಳೋದೇನೆಂದರೆ 10 ರೂಪಾಯಿ ನಾಣ್ಯಗಳು ರದ್ದಾಗಿದೆ, ಚಲಾವಣೆಯಲಿಲ್ಲ
ಎಂಬ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದಿದೆ. ಈ ಸಮಸ್ಯೆ ಮನಗಂಡ RBI ಇತ್ತೀಚೆಗಷ್ಟೇ ಅ.14 
ಮತ್ತು 15ರಂದು ಆಯ್ದ ಬ್ಯಾಂಕ್​ಗಳ ಸಮನ್ವಯದಲ್ಲಿ 10 ರೂ. ಕಾಯಿನ್​ಗಳು ಇಂದಿಗೂ ಕಾರ್ಯರೂಪದಲ್ಲಿದೆ
ಎಂಬುದನ್ನು ತಿಳಿಹೇಳಲು ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಆರಂಭಿಸಿದೆ.

ಆದ್ದರಿಂದ, ಹತ್ತು ರೂ. ನಾಣ್ಯಗಳ ವಿನ್ಯಾಸಗಳು ಆಗಾಗ್ಗೆ ಬದಲಾಗುತ್ತಿರುತ್ತದೆ. ಕಾಲಕ್ಕೆ ತಕ್ಕಂತೆ
ಹೊಸ ಡಿಸೈನ್​ನೊಂದಿಗೆ ಮುದ್ರಿತವಾಗಿ, ಚಲಾವಣೆಗೆ ಬರುತ್ತದೆ. ಈ ಕಾಯಿನ್​ಗಳು ಕಾನೂನುಬದ್ಧವಾಗಿದ್ದು,
ವಹಿವಾಟುಗಳಿಗೆ ಮುಕ್ತವಾಗಿವೆ. ಇಂತಹ ನಾಣ್ಯಗಳನ್ನು ವ್ಯಾಪಾರಸ್ಥರು ಸ್ವೀಕರಿಸಬಹುದಾಗಿದೆ. ಸಾರ್ವಜನಿಕರು
ತಮ್ಮ ಬಳಿಯಿರುವ ನಾಣ್ಯಗಳನ್ನು ಆರ್​ಬಿಐ ಅಡಿಯಲ್ಲಿರುವ ಎಲ್ಲಾ ಶಾಖೆಗಳಲ್ಲಿಯೂ ವಿನಿಮಯ ಮಾಡಿಕೊಳ್ಳಲು
ಅವಕಾಶ ನೀಡಿದೆ. ಈ ಕುರಿತಂತೆ ಬ್ಯಾಂಕ್​ಗಳಿಗೂ ಆರ್​ಬಿಐ ನಿರ್ದೇಶನ ಕೊಟ್ಟಿದೆ.

Advertisement
