# ಧರ್ಮಸ್ಥಳದಲ್ಲಿ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ವ್ಯಸನ ಮುಕ್ತರ ಸಮ್ಮಿಲನ, ಶತದಿನೋತ್ಸವ ಕಾರ್ಯಕ್ರಮ

- Link: https://hosakannada.com/news/dharmasthala-janajagruthi-vedike-trust/
- Published: 2026-06-12T13:28:22+00:00
- Author: ಹೊಸಕನ್ನಡ ನ್ಯೂಸ್

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಅಖಿಲ ಕರ್ನಾಟಕ
ಜನಜಾಗೃತಿ ವೇದಿಕೆ ಟ್ರಸ್ಟ್‌, ಜನಜಾಗೃತಿ ಪ್ರಾದೇಶಿಕ ವಿಭಾಗ, ಬೆಳ್ತಂಗಡಿಇದರ ಆಶ್ರಯದಲ್ಲಿರಾಜ್ಯಾದ್ಯಂತ
ನಡೆಸಲಾದಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಸಂತೃಪ್ತ ಜೀವನ ನಡೆಸುತ್ತಿರುವವ್ಯಸನಮುಕ್ತರ ಸಮ್ಮಿಲನ
ಮತ್ತು ಶತದಿನೋತ್ಸವ ಕಾರ್ಯಕ್ರಮ ಜೂ.12ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ
ನಡೆಯಿತು.

Sponsored

ಸಭಾ ಕಾರ್ಯಕ್ರಮಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ
ಹೆಗ್ಗಡೆಯವರು ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕೊಡಗು ವಿರಾಜಪೇಟೆ ಶ್ರೀ ಆರಮೇರಿ ಕಳಂಚೇರಿ ಮಠದ
ಶ್ರೀ ನಿ.ಪ್ರ.ಸ್ವ. ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಆಶೀರ್ವಚನ ನೀಡಿದರು.ವಾರ್ಷಿಕ ವರದಿಯನ್ನು
ಧರ್ಮಸ್ಥಳ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಡಾ|| ಹೇಮಾವತಿ ವೀ.ಹೆಗ್ಗಡೆಯವರು ಬಿಡುಗಡೆ ಮಾಡಿದರು.

Advertisement

Advertisement

ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್ ನವಜೀವನ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ‘
ನವಜೀವನ’ ಕಿರು ಚಿತ್ರ ಹಸ್ತಾಂತರ ಮಾಡಲಾಯಿತು. ಶ್ರೀ ಕ್ಷೇ.ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ ಮುಖ್ಯ
ಕಾರ್ಯನಿರ್ವಾಹಣಾಧಿಕಾರಿ ಅನಿಲ್‌ ಕುಮಾ‌ರ್ ಎಸ್. ಎಸ್. ಆಶಯ ನುಡಿಗಳನ್ನು ಮಾತನಾಡಿದರು. ಅಖಿಲ ಕರ್ನಾಟಕ
ಜನಜಾಗೃತಿ ವೇದಿಕೆ ಟ್ರಸ್ಟ್ ಟ್ರಷ್ಟಿ ವಿ. ರಾಮ ಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ್
ಕಾರಂತ್, ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಗಿರೀಶ್ ಕೆ. ಎಸ್., ಜನಜಾಗೃತಿ ವೇದಿಕೆಯ
ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ, ಹಣಕಾಸು ನಿರ್ದೇಶಕ ಶಾಂತಾರಾಮ ಪೈ,ಗೌರವ ಉಪಸ್ಥಿತರಿದ್ದರು.
ಕೇಂದ್ರ ಕಚೇರಿಯ ಸಿಬ್ಬಂದಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಾರ್ಯದರ್ಶಿ, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಿಸ್
ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ರಾಜ್ಯ ಸಂಘಟನಾ ಅಧ್ಯಕ್ಷನಟರಾಜ್ ಬಾದಾಮಿ ವಂದಿಸಿದರು. ಕೂಡ್ಲಿಗಿಯ
ಸತೀಶ್ ಖಾನಹೊಸಳ್ಳಿ, ಮಂಜುಳಾ ತುಮುಕೂರು ಪಾನಮುಕ್ತರ ಅನಿಸಿಕೆ ವ್ಯಕ್ತಪಡಿಸಿದರು. ಅಖಿಲ ಕರ್ನಾಟಕ
ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ್ ಆಚಾರ್ಯ ನಿರೂಪಿಸಿದರು. ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು,
ಸದಸ್ಯರು, ನವಜೀವನ ಸಮಿತಿ ಸದಸ್ಯರು, ಕ್ಷೇತ್ರದ ವಿವಿಧ ವಿಭಾಗಗಳ ಮುಖ್ಯಸ್ಥರು, ಗ್ರಾಮಾಭಿವೃದ್ಧಿ
ಯೋಜನೆಯ ಕಾರ್ಯಕರ್ತರು ಹಾಜರಿದ್ದು ಸಹಕರಿಸಿದರು.

Advertisement
