# ದೇವರಗುಡ್ಡ ಕಾರ್ಣಿಕ ನುಡಿ ಭಾರೀ ಸಂಚಲನ: ಸಾಧು-ಸಂತರು ದೇಶದ ಪ್ರಧಾನಿಯಾಗುತ್ತಾರೆ!

- Link: https://hosakannada.com/news/devargudda-karniks-words-cause-a-huge-stir-saints-and-sages-are-becoming-the-countrys-leaders/
- Published: 2026-10-19T21:26:12+00:00
- Author: ಹೊಸಕನ್ನಡ ನ್ಯೂಸ್

ಹಾಸನ, ಅ.19: ದಸರಾ ಮತ್ತು ನವರಾತ್ರಿ ಮಹೋತ್ಸವದ ಅಂಗವಾಗಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ
ದೇವರಗುಡ್ಡದಲ್ಲಿ ನುಡಿಯಲಾದ ಮಾಲತೇಶ (ಮೈಲಾರಲಿಂಗೇಶ್ವರ) ದೇವರ ಕಾರ್ಣಿಕ ದೈವವಾಣಿ ಭಾರೀ ಸಂಚಲನ 
ಸೃಷ್ಟಸಿದೆ.

Sponsored

“ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್‌…”ಎಂದು ನುಡಿಯಲಾದ ಈ ವರ್ಷದ ದೈವವಾಣಿಗೆ ದೇವಸ್ಥಾನದ
ಪ್ರಧಾನ ಅರ್ಚಕರಾದ ಸಂತೋಷ್‌ ಭಟ್‌ ಗುರೂಜಿ ವಿಶ್ಲೇಷಣೆ ನೀಡಿದ್ದಾರೆ.

Advertisement

Advertisement

ಕೆಂಪುಕೋಟೆ ಎಂಬುದು ದೇಶದ ಅತ್ಯುನ್ನತ ಆಡಳಿತ ಮತ್ತು ನಾಯಕತ್ವದ ಶಕ್ತಿಕೇಂದ್ರ, ಈ ದೈವವಾಣಿಯ ಪ್ರಕಾರ,
ಮುಂದಿನ ದಿನಗಳಲ್ಲಿ ಕೆಂಪುಕೋಟೆಯ ಮೇಲೆ ಸಾಧು ಸಂತರು ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ. ಅಂದರೆ
ಭಾರತ ದೇಶವನ್ನು ಸಾಧು-ಸಂತರು ಮುನ್ನಡೆಸಲಿದ್ದಾರೆ ಹಾಗೂ ಅವರೇ ದೇಶದ ಪ್ರಧಾನ ಮಂತ್ರಿಯಾಗುವ ಸ್ಪಷ್ಟ
ಮುನ್ಸೂಚನೆಯನ್ನು ಮಾಲತೇಶ ದೇವರು ನೀಡಿದ್ದಾರೆ. ದೇಶದ ಚುಕ್ಕಾಣಿ ಸಂತರ ಕೈಸೇರಲಿದೆ ಎಂದು ಸ್ಫೋಟಕ
ಭವಿಷ್ಯ ನುಡಿದಿದ್ದಾರೆ.

Advertisement
