# ಕಡಬ : ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಿಂದ ಚಿನ್ನ ,ಬೆಳ್ಳಿಯ ಆಭರಣ ,ಡಿವಿಆರ್,ಹಾರ್ಡ್ ಡಿಸ್ಕ್ ,ಮಾನಿಟರ್ ಕಳ್ಳತನ

- Link: https://hosakannada.com/news/dakshina-kannada-news-kadaba-temple-theft-crime-news/
- Published: 2023-08-18T19:30:26+00:00
- Author: Praveen Chennavara

ಕಡಬ: ಕಡಬ ತಾಲೂಕಿನ ಬಲ್ಯ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.
ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಚಿನ್ನ , ಬೆಳ್ಳಿಯ ಆಭರಣ ಹಾಗೂ ಸಿ ಸಿ ಕ್ಯಾಮರದ ಪರಿಕರಗಳನ್ನು 
ಕಳವು ಮಾಡಿದ್ದಾರೆ.

Sponsored

ಈ ಘಟನೆ ಶುಕ್ರವಾರ ಬೆಳಕಿಗೆ ಬಂದಿದ್ದು, ದೇವಸ್ಥಾನದ ಅರ್ಚಕ ರವಿಪ್ರಸಾದ್ ಭಟ್ ಎಂದಿನಂತೆ ಬೆಳಿಗ್ಗೆ
ಪೂಜೆಗೆಂದು ದೇವಸ್ಥಾನದ ಬಾಗಿಲು ತೆರೆದಾಗ ಮುಖ್ಯದ್ವಾರದ ಚಿಲಕಕ್ಕೆ ಹಾನಿಯಾಗಿರುವುದು ಕಂಡುಬಂದಿದೆ.

Advertisement

Advertisement

ದೇವರ ಮೂರ್ತಿಗೆ ಹಾಕಲಾದ ಸುಮಾರು ಅಂದಾಜು 35000 ರೂಪಾಯಿಯ ಚಿನ್ನ ಮತ್ತು ಬೆಳ್ಳಿಯ ಅಭರಣ , ಸುಮಾರು
36000 ರೂಪಾಯಿಯ ಸಿಸಿ ಕ್ಯಾಮೆರಾದ ಡಿ ವಿ ಅರ್, ಹಾರ್ಡ್ ಡಿಸ್ಕ್ , ಟಿ ವಿ ಮಾನಿಟರ್ ಕಳ್ಳರು ಕದ್ದೊಯ್ದಿದ್ದಾರೆ.

ಈ ಕುರಿತು ಅರ್ಚಕ ರವಿಪ್ರಸಾದ್ ಭಟ್ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement
