# ದ.ಕ. ಭಾರತೀಯ ಜನಾ ಪಾರ್ಟಿ- ಸೇವಾ ಸಂಕಲ್ಪ ಅಭಿಯಾನ- ಭಾಷಣ, ಚಿತ್ರಕಲಾ ಸ್ಪರ್ಧೆ, ಬೆಳ್ತಂಗಡಿಗೆ ಹಲವು ಪ್ರಶಸ್ತಿ

- Link: https://hosakannada.com/news/dakshina-kannada-bharatiya-janata-party-seva-sankalp-campaign-speech-art-competition-many-awards-for-beltangadi/
- Published: 2026-10-09T11:59:54+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಸೇವಾಸಂಕಲ್ಪ ಅಭಿಯಾನ ಸಲುವಾಗಿ ಮಂಗಳೂರು
ನಲ್ಲಿ ಅಕ್ಟೋಬರ್ 08 ರಂದು ನಡೆದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯ ಪ್ರೌಢಶಾಲೆ ವಿಭಾಗದಲ್ಲಿ ಪ್ರಥಮ
ಧನುಶ್ರೀ ಎಸ್.ಕುಲಾಲ್ ಸರಕಾರಿ ಪ್ರೌಢಶಾಲೆ ವೇಣೂರು, ದ್ವಿತೀಯ ಶೃತ ಆಳ್ವ ಎಸ್. ಡಿ. ಎಂ.ಶಾಲೆ ಉಜಿರೆ,
ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನ ಪೂಜಿತಾ ಎಸ್ ಚಾರ್ಮಾಡಿ, ಅಂಬಿಕಾ ವಿದ್ಯಾಲಯ ಹಾಗೂ ದೀಪಕ್ ಕೂತ್ತೂರು
ಎಸ್. ಡಿ. ಎಂ. ಕಾಲೇಜು ಉಜಿರೆ, ಚಿತ್ರಕಲಾ ಸ್ಪರ್ಧೆ ಕಿರಿಯರ ವಿಭಾಗದಲ್ಲಿ ಪ್ರಥಮ ಶ್ರೀದೇವಿ ಆಚಾರ್ಯ
ಪಿಎಂಶ್ರೀ ಕೆಪಿಎಸ್ ಶಾಲೆ ಬಜಿರೆ, ಹಿರಿಯರ ವಿಭಾಗದಲ್ಲಿ ದ್ವಿತೀಯ ಅನ್ವಿತ್ ಎಸ್. ಡಿ. ಎಂ. ಆಂಗ್ಲಮಾಧ್ಯಮ
ಶಾಲೆ ಉಜಿರೆ ಇವರುಗಳು ಪ್ರಶಸ್ತಿ ತನ್ನದಾಗಿಸಿಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Sponsored

ವಿಜೇತರಿಗೆ ಶಾಸಕರಾದ ಹರೀಶ್ ಪೂಂಜಾ ಹಾಗೂ ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಅಭಿನಂದನೆ ಸಲ್ಲಿಸಿದರು.

Advertisement

Advertisement

Advertisement
