# ಹಳಿತಪ್ಪಿದ ದಾದರ್‌-ಪುದುಚೇರಿ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲು

- Link: https://hosakannada.com/news/dadar-puducheri-chalukya-express-rail/
- Published: 2022-04-16T09:41:34+00:00
- Author: ಹೊಸಕನ್ನಡ ನ್ಯೂಸ್

ಕರ್ನಾಟಕ ಮಾರ್ಗವಾಗಿ ಸಂಚರಿಸುವ ದಾದರ್‌-ಪುದುಚೇರಿ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲು ಲಗುರುವಾರ ರಾತ್ರಿ
ಮುಂಬೈನ ಮಾತುಂಗಾ ರೈಲು ನಿಲ್ದಾನದಲ್ಲಿ ಹಳಿ ತಪ್ಪಿದೆ. ಪಕ್ಕದಲ್ಲೇ ನಿಂತಿದ್ದ ಮುಂಬೈ-ಗದಗ ಎಕ್ಸ್‌ಪ್ರೆಸ್‌
ರೈಲಿಗೆ ಉಜ್ಜಿಕೊಂಡು ಹೋಗಿದೆ.

Sponsored

ದೇಶದ ಸುವರ್ಣ ಕ್ಷಣವನ್ನು ನೆನಪಿಸುವ ಸ್ಮರಣೀಯ ದಿನದ ಮೊದಲು ಮಾಟುಂಗಾ ಬಳಿ ಈ ರೈಲು ಅಪಘಾತ ಸಂಭವಿಸಿದೆ.
ದೇಶದ ಮೊದಲ ರೈಲು ಮುಂಬೈನಿಂದ ಥಾಣೆಗೆ 16 ಏಪ್ರಿಲ್ 1853 ರಂದು ಓಡಿತ್ತು.

Advertisement

Advertisement

ರಾತ್ರಿ 9.45ರ ಸುಮಾರಿಗೆ ದಾದರ್‌ನಿಂದ ಹೊರಟ ಕೆಲವೇ ನಿಮಿಷಗಳಲ್ಲಿ ರೈಲು ಹಳಿತಪ್ಪಿ ಈ ಘಟನೆ ನಡೆದಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಪದುಚೇರಿ-ದಾದರ್‌ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 11005) ಹಾಗೂ ಛತ್ರಪತಿ
ಶಿವಾಜಿ ಟರ್ಮಿನಸ್‌-ಗದಗ (ರೈಲು ಸಂಖ್ಯೆ 11139) ರದ್ದುಪಡಿಸಲಾಗಿದ್ದು,ಮುಂಬೈನ ದಾದರ್‌ ಮಾರ್ಗದಲ್ಲಿ
ಈ ಘಟನೆಯಿಂದ ರೈಲು ಸಂಚಾರ ಸ್ಥಗಿತಗೊಂಡು ರಾತ್ರಿ ಇಡೀ ಪ್ರಯಾಣಿಕರು ಪರದಾಡಿದ್ದಾರೆ.

ಇಲ್ಲಿಯವರೆಗೆ ಯಾವುದೇ ಗಾಯಗಳು ವರದಿಯಾಗಿಲ್ಲ. ಒಂದು ಬೋಗಿ ಹಳಿತಪ್ಪಿತು. ಉಪನಗರ ರೈಲುಗಳು ಓಡುತ್ತಿವೆ.
ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ಸಹಾಯ ಮಾಡುತ್ತಿದೆ. 

Advertisement
