# D.K Suresh: ಕನಕಪುರದಿಂದ ಡಿಕೆ ಸುರೇಶ್ ನಾಮಪತ್ರ, ಹಾಗಾದ್ರೆ ಪದ್ಮನಾಭ ನಗರಕ್ಕೆ ಹೋಗ್ತಾರಾ ಡಿಕೆ ಶಿವಕುಮಾರ್ ?!

- Link: https://hosakannada.com/news/d-k-suresh-nomination-in-kanakapura/
- Published: 2023-04-20T15:08:52+00:00
- Author: ಹೊಸಕನ್ನಡ ನ್ಯೂಸ್

D.K Suresh: ಚುನಾವಣಾ ಕಾವು ಎಲ್ಲೆಡೆ ಗರಿಗೆದರಿದ್ದು, ನಾಮ ಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ.
ಈ ನಡುವೆ, ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಭರ್ಜರಿ ಗೆಲುವು ಸಾಧಿಸುವ ರಣತಂತ್ರ
ರೂಪಿಸಿದ್ದಾರೆ. ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಶೋಕ್ ಅವರಿಗೆ ಕಾಂಗ್ರೆಸ್
ಎರಡು ಕ್ಷೇತ್ರಗಳಿಗೆ ಟಿಕೆಟ್  ನೀಡಿದ್ದು, ಅವರನ್ನು ಕನಕಪುರದಲ್ಲಿ [ಡಿಕೆ. ಶಿವಕುಮಾರ್](https://en.wikipedia.org/wiki/D._K._Shivakumar)
ಅವರ ವಿರುದ್ಧ ಕಣಕ್ಕೆ ಇಳಿಸಲು ತಯಾರಿ ನಡೆಸಿದೆ. ಬಿಜೆಪಿಗೆ ತಿರುಗು ಬಾಣ ನೀಡಲು ಮುಂದಾಗಿರುವ  ಡಿಕೆಶಿ,
ತಮ್ಮ ಸಹೋದರ ಡಿಕೆ ಸುರೇಶ್ ಅವರನ್ನು ಪದ್ಮನಾಭನಗರದಲ್ಲಿ ಆರ್. ಅಶೋಕ್ ವಿರುದ್ಧ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.

Sponsored

ರಾಮನಗರದ ಸಂಸದ ಡಿಕೆ ಸುರೇಶ್ ( D.K Suresh) ಕನಕಪುರ ವಿಧಾನಸಭಾ ಕ್ಷೇತ್ರದಿಂದ (Kanakapur Constituency)
ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಹೋದರ ಡಿಕೆ ಶಿವಕುಮಾರ್  (KPCC President
DK Shivakumar) ಅವರ ನಾಮಪತ್ರ ನಿರಾಕರಣೆ ಆಗುವ ಸಂಭವ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮವಾಗಿ
ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ[.](http://ಸಲ್ಲಿಸಿದ್ದಾರೆ.ಡಿಕೆ)ಡಿಕೆ ಶಿವಕುಮಾರ್ ಮೂರು
ದಿನಗಳ ಹಿಂದೆ ಮೆಗಾ ರೋಡ್ ಶೋ ಮೂಲಕ ನಾಮಪತ್ರ (Nomination) ಸಲ್ಲಿಸಿದ್ದು, ಕೇವಲ ಆಪ್ತರ ಸಮ್ಮುಖದಲ್ಲಿ
ಕನಕಪುರ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

Advertisement

Advertisement

ಇದನ್ನೂ ಓದಿ: [KPSC ಕಿರಿಯ ಅಭಿಯಂತರರ ನೇಮಕಾತಿ ಕುರಿತು ಬಿಗ್ ಅಪ್ಡೇಟ್ ಇಲ್ಲಿದೆ!](https://hosakannada.com/2023/04/20/kpsc-junior-engineer-recruitment-2023/)

Advertisement
