# ಕ್ರಿಪ್ಟೋ ಕರೆನ್ಸಿ ಹಗರಣ: ಹ್ಯಾಕರ್‌ ಶ್ರೀಕಿಗೆ ಹೈಕೋರ್ಟ್‌ನಿಂದ ಜಾಮೀನು

- Link: https://hosakannada.com/news/crypto-currency-scam-hacker-shrike-gets-bail-from-high-court/
- Published: 2026-10-12T17:36:46+00:00
- Author: ಹೊಸಕನ್ನಡ ನ್ಯೂಸ್

ಬೆಂಗಳೂರು: ಕ್ರಿಪ್ಟೋಕರೆನ್ಸಿ ಹಗರಣಕ್ಕೆ ಕುರಿತಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕರಣದಲ್ಲಿ
ಹ್ಯಾಕರ್‌ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ ಮತ್ತು ಆತನ ಅಕೌಂಟೆಂಟ್‌ ರಾಬಿನ್‌ ಖಂಡೇಲ್‌ವಾಲ್‌ಗೆ
ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್‌ 3 ಮತ್ತು 4 ರ ಅಡಿಯಲ್ಲಿ
ಆರೋಪ ಎದುರಿಸುತ್ತಿರುವ ಇಬ್ಬರು ಆರೋಪಿಗಳು ನಿಯಮಿತ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿ
ನ್ಯಾಯಾಲಯ ಈ ಆದೇಶ ನೀಡಿದೆ.

Sponsored

Advertisement

Advertisement

Advertisement
