# ಅರಣ್ಯ ಪ್ರದೇಶದಲ್ಲಿ ಈಜಲು ಹೋದ ಮಹಿಳೆಯನ್ನು ಎಳೆದೊಯ್ದ ಮೊಸಳೆ

- Link: https://hosakannada.com/news/crocodile-drags-away-woman-who-went-swimming-in-a-forest-area/
- Published: 2026-07-02T14:29:14+00:00
- Author: ಹೊಸಕನ್ನಡ ನ್ಯೂಸ್

ಅಮೆರಿಕಾ ಫ್ಲೋರಿಡಾ ರಾಜ್ಯದ ಅರಣ್ಯ ಪ್ರದೇಶದಲ್ಲಿ ಈಜಲು ಹೋದ 31 ವರ್ಷದ ಮಹಿಳೆಯ ಮೇಲೆ ಬೃಹತ್‌ ಮೊಸಳೆಯೊಂದು
ದಾಳಿ ಮಾಡಿದ್ದು, ಮಹಿಳೆ ಸಾವಿಗೀಡಾಗಿದ್ದಾರೆ. ಪ್ರೇಯಸಿಯನ್ನು ಮೊಸಳೆಯ ಬಾಯಿಯಿಂದ ಬಿಡಿಸಲು ಹೋದ 
ಆಕೆಯ ಪ್ರಿಯಕರ, ಸೆಣಸಾಡಿದರೂ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆ ಆಸ್ಪತ್ರೆಗೆ ಸಾಗಿಸುವ ದಾರಿ
ಮಧ್ಯೆಯೇ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ.

Sponsored

ಜೂನ್‌ 28 ರ ಭಾನುವಾರ ತನ್ನ ಗೆಳೆಯ ಚಾನ್ಸ್‌ ಆಲಿಸನ್‌ ಮತ್ತು ಇನ್ನೋರ್ವ ಸ್ನೇಹಿತನ ಜೊತೆ ಬ್ರಿಟಾನಿ
ಕ್ಲಾರ್ಕ್‌ ಎನ್ನುವ ಯುವತಿ ಒರ್ಲ್ಯಾಂಡೊ ನಗರದ ಸಮೀಪವಿರು ಲಿಟಲ್‌ ಬಿಗ್‌ ಎಕಾನ್‌ ಸ್ಟೇಟ್‌ ಫಾರೆಸ್ಟ್‌
ಕಾಡಿಗೆ ಪಾದಯಾತ್ರೆ ಹೋಗಿದ್ದರು. ಅಲ್ಲಿ ಎಕಾನ್ಲಾಕ್‌ಹ್ಯಾಚೀ ನದಿಯ ಕೇವಲ ಮೂರು ಅಡಿ ಆಳದ ನೀರಿನಲ್ಲಿ
ಈಜುತ್ತಿದ್ದಾಗ, ಮೊಸಳೆ ಇದ್ದಕ್ಕಿದ್ದಂತೆ ಬ್ರಿಟಾನಿ ಮೇಲೆ ದಾಳಿ ಮಾಡಿದೆ.

Advertisement

Advertisement

ಮಹಿಳೆಯ ಒಂದು ತೋಳನ್ನು ಕಚ್ಚಿ ಹಿಡಿದು, ನೀರೊಳಗೆ ಎಳೆದುಕೊಂಡು ಹೋದಾಗ, ಈ ವೇಳೆ ಆಕೆಯನ್ನು ರಕ್ಷಿಸಲು
ಗೆಳೆಯ ಆಲಿಸನ್‌ ಇಬ್ಬರೂ ನೀರೊಳಗೆ ಎಳೆಯಲ್ಪಟ್ಟಿದ್ದಾರೆ. ಆಲಿಸನ್‌ ಧೈರ್ಯ ಮಾಡಿ ಮೊಸಳೆಯ ಬಾಯಿಯಿಂದ
ಬ್ರಿಟಾನಿಯ ಒಂದು ಕೈಯನ್ನು ಬಿಡಿಸುವಲ್ಲಿ ಯಶಸ್ವಿಯಾದರೂ, ಮೊಸಳೆ ಆಕೆಯ ಇನ್ನೊಂದು ತೋಳನ್ನು ಕಚ್ಚಿ
ಹಿಡಿದಿದೆ. ಕೊನೆಗೂ ಮೊಸಳೆ ಹಿಡಿತ ಸಡಿಲ ಮಾಡಿದಾಗ ಆಲಿಸನ್‌ ಬ್ರಿಟಾನಿಳನ್ನು ನದಿಯ ದಡಕ್ಕೆ ಎಳೆದುಕೊಂಡು
ಪಿಸಿಆರ್‌ ನೀಡಲು ಪ್ರಯತ್ನ ಮಾಡಿದ್ದಾರೆ. ಆದರೆ ಆಕೆಯ ಎರಡೂ ತೋಳುಗಳು ಭೀಕರವಾಗಿ ಹಾನಿಯಾಗಿತ್ತು.

ಫ್ಲೋರಿಯಾ ವನ್ಯಜೀವಿ ಸಂರಕ್ಷಣಾ ಆಯೋಗ ಕೂಡಲೇ ಆ ನದಿಯ ವಲಯದಿಂದ 12, 13 ಅಡಿ ಉದ್ದದ ಎರಡು ಬೃಹತ್‌
ಮೊಸಳೆಗಳನ್ನು ಸೆರೆಹಿಡಿದಿದ್ದು, ಮಹಿಳೆಯ ಮೇಲೆ ದಾಳಿ ಮಾಡಿದ್ದು, ಇದೇ ಮೊಸಳೆಯೇ ಎಂದು ಪತ್ತೆಹಚ್ಚಲು
ಡಿಎನ್‌ಎ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

Advertisement
